ಮತ ಎಣಿಕೆ ಕೇಂದ್ರಗಳಿಗೆ ಖಾಕಿ ಕಾವಲು

ಮತ ಎಣಿಕೆ ಕೇಂದ್ರಗಳಿಗೆ ಖಾಕಿ ಕಾವಲು

ಬೆಂಗಳೂರು: ರಾಜ್ಯದಲ್ಲಿ ಇಂದು ವಿಧಾನಸಭಾ ಫಲಿತಾಂಶದ ದಿನವಾಗಿದ್ದು ಎಲ್ಲಾ ಅಭ್ಯರ್ಥಿಗಳು ಫಲಿತಾಂಶದ ಎದುರು ನೋಡುತ್ತಿದ್ದಾರೆ.

ಬೆಂಗಳೂರಿನ ನಾಲ್ಕು ಕಡೆ 28 ವಿಧಾನಸಭಾ ಕ್ಷೇತ್ರ ಮತ ಎಣಿಕೆ ಕಾರ್ಯ ಬಿಡಿಸಿನಿಂದ ನಡೆಯುತಿದ್ದು ತಲಾ ಒಂದು ಕೇಂದ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುತಿದೆ. ಒಂದೊಂದು ಕೇಂದ್ರಕ್ಕೆ ತಲಾ 1 ಸಾವಿರ ಅಧಿಕಾರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ನಾಲ್ಕು ಸಾವಿರ ಮಂದಿ ಸಿಬ್ಬಂದಿ ಬಳಕೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

28 ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ಒಟ್ಟು 481 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತದಾನದ ಎಣಿಕೆಗೆ ಎರಡರಿಂದ ಮೂರು ಟೇಬಲ್‌ಗಳನ್ನು ಮೀಸಲಿಡಲಾಗುವುದು. ಈಗಾಗಲೇ 14 ಮಂದಿ ವೀಕ್ಷಕರು ಇದ್ದಾರೆ. ಹೊಸದಾಗಿ 14 ವೀಕ್ಷಕರು ದೆಹಲಿಯಿಂದ ಆಗಮಿಸಿದ್ದಾರೆ. ಹೀಗಾಗಿ, ತಲಾ ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ವೀಕ್ಷಕರಂತೆ 28 ವೀಕ್ಷಕರನ್ನು ನಿಯೋಜನೆ ಮಾಡಲಾಗುತ್ತದೆ ಎಂದರು.

Related