ಗೋವಾ ಸಿಎಂ ಜೊತೆ ರಾಕಿ ಭಾಯ್

ಕೆಜಿಎಫ್ 2 ದೇಶಾದ್ಯಂತ ಮಾತ್ರವಲ್ಲದೆ ವಿದೇಶದಲ್ಲಿಯೂ ಭಾರೀ ಸದ್ದು ಮಾಡಿದ್ದು ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಪಾಲಿಟಿಕ್ಸ್ ಗೆ ಎಂಟ್ರಿ ಕೊಡುವ ಬಗ್ಗೆ ಬಾರೀ ಚರ್ಚೆ ಶುರುವಾಗಿದೆ. 

ಸಮಾಜಮುಖಿ ಕಾರ್ಯಗಳಲ್ಲಿ ಮುಂದಿರುವ ಯಶ್ ದಂಪತಿ ಇತ್ತೀಚೆಗೆ ಗೋವಾ ಸಿಎಂ ಅವನ್ನು ನೇರವಾಗಿ ಬೇಟಿಯಾಗಿರುವುದು ಈ ಎಲ್ಲ ಚರ್ಚೆಗಳಿಗೆ ಕಾರಣವಾಗಿದೆ. ಪತ್ನಿ ಸಮೇತರಾಗಿ ಗೋವಾ ಸಿಎಂ ಪ್ರಮೋದ್ ಸಾವಂತ್ ರವರನ್ನು ಭೇಟಿಯಾಗಿರುವ ಯಶ್ ನಡೆ ರಾಜಕೀಯಕ್ಕೆ ಧುಮುಕುವುದರ ಮುನ್ಸೂಚನೆಯೇ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

 ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಗೋವಾ ಸಿಎಂ ಭೇಟಿ ಮಾಡಿದ್ದು ಬಾಗಲಕೋಟೆ ಯಶಿಸಂ ಎನ್ನುವ ಇನ್ ಸ್ಟಾಗ್ರಾಮ್ ಪೇಜ್ ಈ ಭೇಟಿಯ ಪೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಯಶ್ ಬಾಸ್ ಗೋವಾ ಸಿಎಂ ಪ್ರಮೋಸ್ ಸಾವಂತ್ ಹಾಗೂ ಕೆವಿಎನ್ ಪ್ರೊಡಕ್ಷನ್ ಜೊತೆ ಪಣಜಿಯಲ್ಲಿ ಎಂದು ಪ್ರೋಸ್ಟ್ ಗೆ ಕ್ಯಾಪ್ಶನ್ ನೀಡಲಾಗಿದೆ.

ಸದ್ಯ ಇದೇ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಅದೇನೇ ಇರಲಿ ಯಶ್ ಕಳೆದ ನಾಲ್ಕೈದು ವರ್ಷಗಳಿಂದ ನಟನೆ ಜೊತೆಗೆ ತಮ್ಮ ಯಶೋಮಾರ್ಗ ಸಂಸ್ಥೆಯ  ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡ್ತಿದ್ದಾರೆ. ಈ ಮೂಲಕ ಸದ್ಯ ರಾಜಕೀಯದಿಂದ ದೂರ ಉಳಿದಿರೋ ಯಶ್ ಸಿನಿಮಾಗಳ ಮೇಲಷ್ಟೇ ಕಾನ್ಸಂಟ್ರೇಟ್ ಮಾಡ್ತಿದ್ದಾರೆ. ಸದ್ಯದಲ್ಲೇ ಪ್ರೊಡಕ್ಷನ್ ಹೌಸ್ ಶುರುಮಾಡುವ ಸಾಧ್ಯತೆ ಇದೆ. ಆದರೆ, ರಾಜಕೀಯಕ್ಕೆ ಬರೋದು ಡೌಟ್ ಅಂತಿದ್ದಾರೆ ರಾಕಿ ಭಾಯ್ ಅಭಿಮಾನಿಗಳು.

 

 

Related