ಹಾಲಿವುಡ್​ ಚಿತ್ರಕ್ಕೂ ಸೆಡ್ಡು ಹೊಡೆದ KGF-2

  • In Cinema
  • May 12, 2022
  • 230 Views
ಹಾಲಿವುಡ್​ ಚಿತ್ರಕ್ಕೂ ಸೆಡ್ಡು ಹೊಡೆದ KGF-2

ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ಸಿನಿಮಾಗೆ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ನೋಡ ನೋಡುತ್ತಲೇ ವರ್ಲ್ಡ್​ ಬಾಕ್ಸ್​ ಆಫೀಸ್​​ ಲೂಟಿ ಹೊಡೆಯುತ್ತಿದೆ.

ಸಲಾಂ ರಾಕಿ ಭಾಯ್ . ಇಡೀ ವಿಶ್ವವೇ ಕಳೆದ ಕೆಲವು ದಿನಗಳಿಂದ ಇದೊಂದು ವಿಷಯದ ಬಗ್ಗೆ ಚರ್ಚೆ ನಡೆಸುತ್ತಲೇ ಇದ್ದಾರೆ. ಇದಕ್ಕೆ ಕಾರಣ ನಮ್ಮ ಮಾನ್​ಸ್ಟರ್​ ರಾಕಿಂಗ್​ ಸ್ಟಾರ್​ ಯಶ್​. ಹೌದು, ಕೆಜಿಎಫ್​ 2 (KGF 2) ಸಿನಿಮಾ ಇಡೀ ವಿಶ್ವದಲ್ಲೇ ತನ್ನ ಆರ್ಭಟವನ್ನು ಮುಂದುವರೆಸಿದ. ವಿಶ್ವದ ಮೂಲೆ ಮೂಲೆಯಲ್ಲೂ ರಾಕಿ ಭಾಯ್​ ವೈಲೆನ್ಸ್) ಜೋರಾಗಿದೆ. ಇನ್ನೂ ದಾಖಲೆಗಳೆಲ್ಲ ಯಶ್​ ಅಬ್ಬರದ ಮುಂದೆ ಬ್ರೇಕ್​ ಆಗಿದೆ. ಒಂದೊಂದೆ ದಾಖಲೆಗಳನ್ನು ಬ್ರೇಕ್ ಮಾಡಿಕೊಂಡು ಬಂದಿದೆ. ಇಡೀ ವಿಶ್ವವೇ ಕನ್ನಡ ಸಿನೆಮಾದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ಈ ಚಿತ್ರ ಹಲವಾರು ದಾಖಲೆಗಳನ್ನು ಧೂಳಿ ಪಟ ಮಾಡಿದೆ. ಸಿನಿಮಾ ರಿಲೀಸ್​ ಆಗಿ 27 ದಿನ ಕಳೆದರು, ಈ ಸಿನಿಮಾವನ್ನು ಟಚ್​ ಮಾಡೋದಕ್ಕೆ ಯಾವ ಸಿನಿಮಾಗಳಿಂದಲೂ ಸಾಧ್ಯವಾಗಿಲ್ಲ.
25 ದಿನಗಳು ಕಳೆದ ಬಳಿಕ ‘ಕೆಜಿಎಫ್ 2’ ಪ್ರದರ್ಶನ ಆಗುತ್ತಿರುವ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಿದ್ದರೂ, ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇದೀಗ ಹಾಲಿವುಡ್​ ಸಿನಿಮಾಗೂ ಸೆಡ್ಡು ಹೊಡೆದಿದ್ದಾರೆ ರಾಕಿ ಭಾಯ್

ಕಳೆದ ವಾರ ‘ಕೆಜಿಎಫ್ 2’ ಸಿನಿಮಾಗೆ ಹಾಲಿವುಡ್ ಸಿನಿಮಾ ‘ಡಾಕ್ಟರ್ ಸ್ಟ್ರೇಂಜ್’ ಕಾಂಪಿಟೇಷನ್ ಕೊಟ್ಟಿತ್ತು. ಇಂದು ರಿಲೀಸ್ ಆಗಿರುವ ಸರ್ಕಾರು ವಾರಿ ಪಾಟ ಸಿನಿಮಾ ಕೂಡ ರಿಲೀಸ್ ಆಗಿದೆ. ಇದರ ಮಧ್ಯೆಯೂ ಕೆಜಿಎಫ್​ 2 ಅಬ್ಬರಿಸುತ್ತಿದೆ ಎಂದರೆ ಕನ್ನಡಿಗರಿಗೆ ಹೆಮ್ಮೆಯ ವಿಚಾರ ಅಲ್ವಾ? 27ನೇ ದಿನವೂ ಕಲೆಕ್ಷನ್ ವಿಚಾರದಲ್ಲಿ ಹಿಂದೆಬಿದ್ದಿಲ್ಲ. ಆದರೆ, 25ನೇ ದಿನ ಹಾಗೂ 26ನೇ ದಿನಕ್ಕೆ ಹೋಲಿಸಿದರೆ, 27ನೇ ದಿನ ‘ಕೆಜಿಎಫ್ 2’ ಕಲೆಕ್ಷನ್ ಇಳಿಕೆ ಕಂಡಿದೆ.

Related