ರಾಮಮಂದಿರ ಉದ್ಘಾಟನೆಗೆ ಕರ್ನಾಟಕ ಸಿಎಂಗಿಲ್ಲ ಆಹ್ಹಾನ!

ರಾಮಮಂದಿರ ಉದ್ಘಾಟನೆಗೆ ಕರ್ನಾಟಕ ಸಿಎಂಗಿಲ್ಲ ಆಹ್ಹಾನ!

ಬೆಂಗಳೂರು: ಅಯೋಧ್ಯದಲ್ಲಿ ರಾಮಮಂದಿರವನ್ನು ಇದೇ ಜನವರಿ 22ರಂದು ಅದ್ದೂರಿಯಾಗಿ ಉದ್ಘಾಟನೆ ಮಾಡಲಾಗುತ್ತಿದ್ದು, ದೇಶದಾದ್ಯಂತ ಗಣ್ಯಾತಿ ಗಣ್ಯರಿಗೆ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ನಾಯಕರು ರಾಮನ ಜಪ ಮಾಡುತ್ತಾ ರಾಮನ ಮೇಲಿರುವಂತಹ ಭಕ್ತಿಯನ್ನು ತೋರಿಸಿಕೊಳ್ಳುತ್ತಿದ್ದಾರೆ.

ಆದರೆ, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಮ ಮಂದಿರ ಉದ್ಘಾಟನೆ ಆಹ್ವಾನ ಬಂದಿಲ್ಲವೆಂದು ರಾಜ್ಯ ಕಾಂಗ್ರೆಸ್ ನ ನಾಯಕರು ಕೇಂದ್ರದ ಮತ್ತು ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಗುಡುಗುತ್ತಿದ್ದಾರೆ.

ಹೌದು ಈಗಾಗಲೇ ರಾಮಮಂದಿರ ಉದ್ಘಾಟನೆಗೆ ಎಲ್ಲಾ ರೀತಿಯ ತಯಾರಿಗಳು ನಡೆಯುತ್ತಿದೆ, ಇನ್ನೂ ಎಲ್ಲಾ ಗಣ್ಯ ವ್ಯಕ್ತಿಗಳಿಗೂ ಆಹ್ವಾನ ನೀಡಿಲಾಗಿದೆ. ಆದರೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಯಾಕೆ ಆಹ್ವಾನ ಬಂದಿಲ್ಲವೆಂದು ಎಲ್ಲರಲ್ಲೂ ಪ್ರಶ್ನೆ ನೋಡಿದೆ.

ಹಾಗಾದರೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಜಾತಿ ರಾಜಕಾರಣ ಮಾಡುತ್ತಿದಿಯಾ ಎಂದು ಕಾಂಗ್ರೆಸ್ ನ ಸಚಿವರು ಮತ್ತು ಶಾಸಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ಇನ್ನೂ ಸಮಯವಿರುವುದರಿಂದ ಕರ್ನಾಟಕ ಮುಖ್ಯಮಂತ್ರಿಗೆ ಕೇಂದ್ರ ಬಿಜೆಪಿಯಿಂದ ವಾಹನ ಬರುತ್ತಾ ಎಂದು ಕಾದು ನೋಡಬೇಕಿದೆ.

 

 

 

 

Related