ಕನ್ನಡದ ಕ್ರಿಕೆಟರ್ ಆಟಗಾರ ಟೀಂ ಇಂಡಿಯಾ ಕೆಎಲ್ ರಾಹುಲ್ ಅವರಿಗೆ ನಿನ್ನೆ ಹುಟ್ಟುಹಬ್ಬದ ಸಂಭ್ರಮ. ಕೆ ಎಲ್ ರಾಹುಲ್ ಅವರಿಗೆ ಈಗ 32 ವರ್ಷ ತುಂಬಿದ್ದು ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.
ರಾಹುಲ್ ಅವರು ಸದ್ಯ ಐಪಿಎಲ್ ನಲ್ಲಿ ಲಕ್ನೋ ಸೂಪರ್, ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದ ಜೊತೆ ಅವರ ಬರ್ತಡೆಯನ್ನು ಆಚರಿಸಿಕೊಂಡಿದ್ದಾರೆ. ಇನ್ನು ಇಡೀ ಕ್ರಿಕೆಟ್ ತಂಡ ರಾಹುಲ್ ಅವರಿಗೆ ಕೇಕ್ ತತ್ತರಿಸಿ ಅವರ ಮೈತುಂಬ ಕೇಕ್ ಅನ್ನು ಮೆತ್ತಿದ್ದಾರೆ. ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕೆ ಎಲ್ ರಾಹುಲ್ ಅಭಿಮಾನಿಗಳು ಹುಟ್ಟು ಹಬ್ಬದ ಶುಭ ಕೋರಿದ್ದಾರೆ.
ಸಿಂಪಲ್ ಆಗಿ ಆಗಮಿಸಿದ ಅವರು ಇತರ ಆಟಗಾರರ ಜೊತೆ ಕೇಕ್ ಕತ್ತರಿಸಿದರು. ಈ ವೇಳೆ ಎಲ್ಲರೂ ರಾಹುಲ್ ಮುಖಕ್ಕೆ ಕೇಕ್ ಹಚ್ಚೋಕೆ ಆರಂಭಿಸಿದರು. ಆ ಬಳಿಕ ರಾಹುಲ್ ಶರ್ಟ್ ತೆಗೆಯುತ್ತಿದ್ದಂತೆ ಅವರ ಮೈಗೆಲ್ಲ ಕೇಕ್ ಮೆತ್ತಲಾಯಿತು. ರಾಹುಲ್ಗೆ ಈಗ 32 ವರ್ಷ ತುಂಬಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.
Someone asked for the full video? 😂💙 https://t.co/nyKJGTpSBR pic.twitter.com/GwcanzVWAf
— Lucknow Super Giants (@LucknowIPL) April 18, 2024