ನೇಹಾ ಕುಟುಂಬಕ್ಕೆ ಜೆಪಿ ನಡ್ದ ಭೇಟಿ

ನೇಹಾ ಕುಟುಂಬಕ್ಕೆ ಜೆಪಿ ನಡ್ದ ಭೇಟಿ

ಹುಬ್ಬಳ್ಳಿ: ನೇಹಾ ನಿವಾಸಕ್ಕೆ ಜೆಪಿ ನಡ್ಡಾ ಇಂದು (ಏಪ್ರಿಲ್ 21 ಭಾನುವಾರ) ರಂದು ಭೇಟಿ ನೀಡಿದ್ದು ನೇಹಾ ಅವರ ಕುಟುಂಬದ ಜೊತೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಇನ್ನು ನೇಹಾ ತಂದೆ ನಿರಂಜನ್ ಅವರು ಜೆಪಿ ನಡ್ಡಾ ಅವರ ಹತ್ತಿರ ತಮ್ಮ ಅಲೆಲನ್ನು ತೋಡಿಕೊಂಡಿದ್ದಾರೆ.
ರಾಜ್ಯದಲ್ಲಿ ನಮ್ಮ ಮಗಳಿಗೆ ಆಗಿರುವಂತಹ ಅನ್ಯಾಯ ಇನ್ಯಾವ ಹೆಣ್ಣುಮಗಳಿಗೂ ಆಗಬಾರದು, ಶಾಲಾ ಕಾಲೇಜು ಹೋಗುವ ಹೆಣ್ಣು ಮಕ್ಕಳಿಗೆ ಹೆಚ್ಚಿನ ಭದ್ರತೆ ಹೋದಗಿಸಿಕೊಳ್ಳಬೇಕೆಂದು ಜೆಪಿ ನಡ್ಡಾ ಅವರ ಹತ್ತಿರ ನೇಹಾ ತಂದೆ ನಿರಂಜನ್ ಹಿರೇಮಠ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಜೆಪಿ ನಡ್ಡಾವರ ಮುಂದೆ ತಮ್ಮಳರನ್ನು ತೋಡಿಕೊಂಡಿದ್ದಾರೆ.
ಇನ್ನು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೆಪಿ ನಡ್ಡಾ ಅವರು, ಈ ಘಟನೆಯಿಂದ ನೇಹಾ ಅವರ ಕುಟುಂಬಕ್ಕೆ ಎಲ್ಲಿಲ್ಲದ ದುಃಖವಾಗಿದೆ.
ನೇಹಾ ಅವರ ಕುಟುಂಬಕ್ಕೆ ನ್ಯಾಯ ಕೊಡಿಸುವುದು ನಮ್ಮ ಬಿಜೆಪಿ ಪಕ್ಷದ ಕರ್ತವ್ಯ ಎಂದು ಹೇಳಿದರು.
ನೇಹಾ ಅವರ ಕುಟುಂಬದ ನೋವಿನಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ ನೇಹಾ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಜೆಪಿ ನಡ್ಡಾ ಅವರು ಹೇಳಿದರು.
ಈ ಪ್ರಕರಣವನ್ನು ನಾನು ತೀರವಾಗಿ ಖಂಡಿಸುತ್ತೇನೆ. ಸರಕಾರ ತೃಷ್ಟಿಕರಣವೇ ಇದಕ್ಕೆ ಕಾರಣ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ನೇಹಾ ಪ್ರಕಾರವನ್ನು ಸಿಬಿಐಗೆ ಒಪ್ಪಿಸಿ ನಮ್ಮ ಕೇಂದ್ರ ಸರ್ಕಾರ ನೆಹರ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ ಎಂದು ಹೇಳಿದರು.

Related