ಕಾಂಗ್ರೆಸ್, ಬಿಜೆಪಿಗೆ ಇಂದೊಂದು ನಾಚಿಕೆ ಗೇಡಿನ ಸಂಗತಿ : ಹೆಚ್ಡಿಕೆ ಅಸಮಾಧಾನ..!

ಕಾಂಗ್ರೆಸ್, ಬಿಜೆಪಿಗೆ ಇಂದೊಂದು ನಾಚಿಕೆ ಗೇಡಿನ ಸಂಗತಿ : ಹೆಚ್ಡಿಕೆ ಅಸಮಾಧಾನ..!

ಬೆಂಗಳೂರು, ಜೂ 10 :  ಇಂದು ನಡೆಯುತ್ತಿರುವ ರಾಜ್ಯಸಭೆ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ 4 ಸ್ಥಾನ ಸ್ಥಾನಗಳಿಗೆ ವಿಧಾನಸೌಧದ 106ನೇ ಕೊಠಡಿಯಲ್ಲಿ ಮತದಾನ ನಡೆಯುತ್ತಿದ್ದು, ಇಂದೇ ಫಲಿತಾಂಶ ಪ್ರಕಟವಾಗಲಿದೆ. ಈ ಸಂಬಂಧ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್​ಡಿಕೆ, 31 ಶಾಸಕರು ನಮಗೆ ಮತ ಹಾಕ್ತಾರೆ. 32 ರಲ್ಲಿ 31 ಮತಗಳು ನಮಗೆ ಬರುತ್ತೆ. ಬಿಜೆಪಿ ಗೆಲ್ಲಿಸೋಕೆಸಿದ್ದರಾಮಯ್ಯ ಹೊರಟಿದ್ದಾರೆ. ಕಾಂಗ್ರೆಸ್ ಬಿಜೆಪಿಯ ಬಿ ಟೀಮ್​. ಇದೊಂದು ನಾಚಿಕೆಗೇಡಿನ ಸಂಗತಿ. ಇವರು ನಕಲಿಜಾತ್ಯಾತೀತವಾದಿಗಳು. ಶ್ರೀನಿವಾಸ್ ಗೌಡ ಕಾಂಗ್ರೆಸ್​ಗೆ ಹಾಕ್ತೇನೆ ಎಂದಿದ್ದಾರೆ.

ರಮೇಶ್ ಕುಮಾರ್ ಬ್ರೈನ್ ವಾಶ್ ಮಾಡಿದ್ದಾರೆ. ಹೆಸರಿಗೆ ಮಾತ್ರ ಪಕ್ಷಾಂತರ ಕಾಯ್ದೆಯಿದೆ. ಈ ನಿಯಮ ಯಾವುದಕ್ಕೂ ಬರಲ್ಲ. ಹಾವಿಗೆ ಹಲ್ಲು ಕಿತ್ತ ರೀತಿಯಂತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Related