ರಾಯಚೂರು : ಲಾಕ್‌ಡೌನ್ ಸಡಿಲಿಕೆ ಮಾಡಿದ್ದು, ಬೆಳಿಗ್ಗೆ 6ರಿಂದ 2 ವರೆಗೂ ದಿನಸಿ ಮತ್ತು ತರಕಾರಿ ಖರೀದಿಗೆ ಅವಕಾಶ ಮಾಡಲಾಗಿದೆ. ಮದ್ಯದಂಗಡಿಗಳಿಗೂ ಅವಕಾಶ ನೀಡಿದ್ದು ಖರೀದಿಗಾಗಿ ಮದ್ಯಪ್ರಿಯರು ಸರದಿ ನಿಂತಿದ್ದಾರೆ.
ರಾಯಚೂರು ನಗರದ ಗಂಜ್ ಸರ್ಕಲ್, ಸ್ಟೇಷನ್ ಸರ್ಕಲ್ ಹಾಗೂ ಗೋಶಾಲಾ ರಸ್ತೆಯಲ್ಲಿರುವ ಎಂಎಸ್‌ಪಿಎಲ್ ಎದುರು ಅತಿಹೆಚ್ಚಿನ ಸಂಖ್ಯೆಯಲ್ಲಿ ಮದ್ಯಪ್ರಿಯರು ನಿಂತಿದ್ದಾರೆ. ಅಂಗಡಿ ತೆರೆಯುವ ಮೊದಲೇ ಸರದಿ ಆರಂಭವಾಗಿತ್ತು.
ಎಂಆರ್‌ಪಿ ದರದಲ್ಲಿ ಮದ್ಯ ಮಾರಾಟ ಮಾಡುವ ಸಿಎಲ್-2 ಅಂಗಡಿಗಳಿಗೂ ಪಾರ್ಸಲ್ ನೀಡುವುದಕ್ಕೆ ಅವಕಾಶ ನೀಡಲಾಗಿದೆ.