ಫೇಸ್ಬುಕ್ ನಲ್ಲೂ ಪಾಕಿಸ್ತಾನಕ್ಕೆ ಜೈ

ಫೇಸ್ಬುಕ್ ನಲ್ಲೂ ಪಾಕಿಸ್ತಾನಕ್ಕೆ ಜೈ

ಬೆಂಗಳೂರು,ಫೆ. 21:  ಪಾಕಿಸ್ತಾನದ ಹೆಸರಿಡಿದು ಅಮೂಲ್ಯ ಇದೇ ಮೊದಲ ಬಾರಿಗೆ ಭಂಡತನ ಪ್ರದರ್ಶಿಸಿಲ್ಲ, ನಾಲ್ಕು ದಿನಗಳ ಹಿಂದೆಯೂ ತನ್ನ ಫೇಸ್ ಬುಕ್ ಖಾತೆಯಲ್ಲಿ ಪಾಕಿಸ್ತಾನವನ್ನು ಉಲ್ಲೇಖಿಸಿದ್ದ ಸಂಗತಿ ಇದೀಗ ಬಹಿರಂಗಗೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸೈದ್ಧಾಂತಿಕ ವಿಚಾರಗಳನ್ನು ಉಗ್ರವಾಗಿ ಪ್ರತಿಪಾದಿಸುತ್ತಿದ್ದ ಅಮೂಲ್ಯ, ಫೆ.16ಕ್ಕೆ ಪೇಸ್ ಬುಕ್ಕಲ್ಲಿ ಫೋಸ್ಟೊಂದನ್ನು ಹಾಕಿ ತಾನು ದೇಶಾತೀತ ವ್ಯಕ್ತಿ ಎಂಬು ಬಿಂಬಿಸಲು ಹೊರಟಿದ್ದಳು.
ನೆರೆದೇಶಗಳಿಗೆ ಜಿಂದಾಬಾದ್ ಎಂದು ಬರೆಯುವಾಗ ಪಾಕಿಸ್ತಾನವನ್ನೂ ಉಲ್ಲೇಖಿಸಿದ್ದಳು. ಅಲ್ಲದೆ, ತನ್ನ ಸೈದ್ಧಾಂತಿಕ ವಿರೋಧಿಗಳಿಗೆ ಸವಾಲು ಹಾಕುವ ಮಾತುಗಳನ್ನಾಡಿದ್ದಳು. ಫೆ.16ರಂದು ಅಮೂಲ್ಯ ಈ ರೀತಿ ಸ್ಟೇಟರ್ ಹಾಕಿಕೊಂಡಿದ್ದಳು. ಹಿಂದೂಸ್ತಾನ್ ಜಿಂದಾಬಾದ್, ಪಾಕಿಸ್ತಾನ ಜಿಂದಾಬಾದ್, ಬಾಂಗ್ಲಾದೇಶ ಜಿಂದಾಬಾದ್, ಶ್ರೀಲಂಕಾ ಜಿಂದಾಬಾದ್, ಆಫ್ಘಾನಿಸ್ತಾನ ಜಿಂದಾಬಾದ್, ಜೈನಾ ಜಿಂದಾಬಾದ್, ಭೂತಾನ್ ಜಿಂದಾಬಾದ್. ಯಾವುದೇ ದೇಶ ಇರಲಿ ಎಲ್ಲಾ ದೇಶಗಳಿಗೂ ಜಿಂದಾಬಾದ್ ಎಂದು ಬರೆದಿದ್ದಳು.

Related