ಐಶ್ವರ್ಯಾ ರೈ ಒಂದು ಫೋಟೋ ಶೂಟ್​ಗೆ  1,500 ಸಂಬಳ ಪಡೆಯುತ್ತಿದ್ದಾರಂತೆ..!!

ಐಶ್ವರ್ಯಾ ರೈ ಒಂದು ಫೋಟೋ ಶೂಟ್​ಗೆ  1,500 ಸಂಬಳ ಪಡೆಯುತ್ತಿದ್ದಾರಂತೆ..!!

ಐಶ್ವರ್ಯಾ ರೈ ಬಚ್ಚನ್​ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಮಾಡೆಲಿಂಗ್ ಮತ್ತು ನಟನೆ ಎರಡರಲ್ಲೂ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ. ತಮ್ಮ ಮಾಡೆಲಿಂಗ್ ದಿನಗಳಲ್ಲಿ ರೈ ಅತ್ಯುತ್ತಮ ರೂಪದರ್ಶಿಯಾಗಿದ್ದರು ಮತ್ತು ಆ ದಿನಗಳ ಅವರ ಕೆಲವು ಫೋಟೋಗಳನ್ನು ಎಸ್​ಜಿಬಿಎಸ್ಆರ್ ಮಹಾರಾಷ್ಟ್ರ ತನ್ನ ಟ್ವಿಟರ್​ ಪೇಜ್​ನಲ್ಲಿ ಹಂಚಿಕೊಂಡಿದೆ.

ಇದರಲ್ಲಿ ಐಶ್ವರ್ಯ ಮತ್ತು ಸೋನಾಲಿ ಬೇಂದ್ರೆ, ತೇಜಸ್ವಿನಿ ಕೊಲ್ಹಾಪುರೆ ಮತ್ತು ಇತರರೊಂದಿಗೆ ಫ್ಯಾಷನ್ ಕ್ಯಾಟಲಾಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣದ ಈ ಫೋಟೋಗಳನ್ನು 1500 ರೂ.ಗಳ ಬಿಲ್​ನೊಂದಿಗೆ ಆನ್​ಲೈನ್​ನಲ್ಲಿ ಹಂಚಿಕೊಳ್ಳಲಾಗಿದೆ. ಆ ಸಮಯದಲ್ಲಿ ಐಶ್ವರ್ಯಾ ರೈ ಒಂದು ಫೋಟೋ ಶೂಟ್​ಗೆ  1,500 ರೂ. ಸಂಭಾವನೆ ಪಡೆಯುತ್ತಿದ್ದರಂತೆ. ಅವರ ಈ ಫೋಟೋ ಸದ್ಯ ವೈರಲ್​ ಆಗುತ್ತಿದೆ. 1992ರ ಮೇ 23ರಂದು ಐಶ್ವರ್ಯಾ ರೈಗೆ 18 ವರ್ಷ ವಯಸ್ಸಾಗಿತ್ತು.

ನಂತರ ಅವರು ಕೃಪಾ ಕ್ರಿಯೇಷನ್ಸ್ ಎಂಬ ಸಂಸ್ಥೆಗೆ ಮಾಡೆಲ್​ ಆಗಿದ್ದರು. ಕ್ಯಾಟಲಾಗ್ ಫೋಟೋ ಮತ್ತು ನಿಯತಕಾಲಿಕ ಮುಖಪುಟದೊಂದಿಗೆ ಚಿತ್ರೀಕರಣದ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. “ಹಲೋ, ಇಂದು ನಾನು ಪ್ರಕಟಿಸಿದ ಫ್ಯಾಷನ್ ಕ್ಯಾಟಲಾಗ್ ನ 30 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇನೆ. ಐಶ್ವರ್ಯಾ ರೈ, ಸೋನಾಲಿ ಬೇಂದ್ರೆ, ನಿಕ್ಕಿ ಅನೇಜಾ, ತೇಜಸ್ವಿನಿ ಕೊಲ್ಹಾಪುರೆ ಈ ಕ್ಯಾಟಲಾಗ್ ಗಾಗಿ ಸಿದ್ಧಪಡಿಸಿದ ಕೆಲವು ರೂಪದರ್ಶಿಗಳು ಎಂದು ಅವರು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

Related