ಮುಖ್ಯ ಆಯುಕ್ತರವರಿಂದ ವಿವಿಧ ಸ್ಥಳ ಪರಿಶೀಲನೆ

ಮುಖ್ಯ ಆಯುಕ್ತರವರಿಂದ ವಿವಿಧ ಸ್ಥಳ ಪರಿಶೀಲನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು  ವಿವಿಧ ಸ್ಥಳಗಳಿಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆಬ್ಬಾಳ ಜಂಕ್ಷನ್ ನಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಪ್ರಮುಖ ಅಂಶಗಳು:

  • ಎಸ್ಟಿಮ್ ಹಾಲ್ ಕಡೆಯಿಂದ ಕೆ.ಆರ್.ಪುರ ಕಡೆಗೆ ಹೋಗುವ ಮಾರ್ಗದ ಅಗಲೀಕರಣವನ್ನು ಕೂಡಲೆ ಮಾಡಲು ಸೂಚನೆ.
  • ಹೆಬ್ಬಾಳ ಕೆರೆ(ಬಳ್ಳಾರಿ ಮಾರ್ಗ)ಯ ರಸ್ತೆ ಅಗಲೀಕರಣ ಮಾಡಲು‌ ಸೂಚನೆ.
  • ಜಂಕ್ಷನ್ ಕೆಳಭಾಗ ಹಾಕೂ ಕೆಲವೆಡೆ ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸಲು ಸೂಚನೆ.
  • ಪಾದಚಾರಿ ಮಾರ್ಗ ಸರಿಪಡಿಸಲು ಸೂಚನೆ.
  • ಪಾದಚಾರಿಗಳ ಕ್ರಾಸಿಂಗ್ ಗೆ ಅನುಕೂಲವಾಗಲು ಈಗಾಗಲೇ ಎರಡು ಕಡೆ ಬ್ಯಾರಿಕೇಡಿಂಗ್ ಮಾಡಿದ್ದು, ಉಳಿದ ಕಡೆಯೂ ಕೂಡಲೆ ಬ್ಯಾರಿಕೇಡಿಂಗ್ ಮಾಡಲು ಸೂಚನೆ.
  • ಹೆಬ್ಬಾಳ ಜಂಕ್ಷನ್ ನ ಪಾದಚಾರಿ ಮಾರ್ಗಗಳಿಗೆ ಗ್ರಿಲ್ ಅಳವಡಿಸಲು‌ ಸೂಚನೆ.
  • ಮಳೆ ನೀರು ರಸ್ತೆ ಮೇಲೆ ನಿಲ್ಲದಂತೆ ಸರಾಗವಾಗಿ ನೀರುಗಾಲುವೆಗೆ ಹರಿದು ಹೋಗುವ ವ್ಯವಸ್ಥೆ ಮಾಡಲು ಸೂಚನೆ.
  • ನೇತಾಡುತ್ತಿರುವ ಒ.ಎಫ್.ಸಿ ಕೇಬಲ್ ಗಳನ್ನು ತೆರವುಗೊಳಿಸಲು ಸೂಚನೆ.

ಕೆ.ಆರ್.ಪುರ(ಟಿನ್ ಪ್ಯಾಕ್ಟರಿ) ಜಂಕ್ಷನ್ ಪರಿಶೀಲನೆ:

  • ಮೆಟ್ರೊ ಸ್ಟೇಷನ್ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಯ ಕೆಲಸವು ತ್ವರಿತಗತಿಯಲ್ಲಿ ನಡೆಯುತ್ತಿದೆ. ಸದರಿ ಕಾಮಗಾರಿಯಿಂದ ನಾಗರಿಕರಿಗೆ ಅನಾನುಕೂಲ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಮೆಟ್ರೊ ಅಧಿಕಾರಿಗಳಿಗೆ ಸೂಚನೆ.
  • ಬಸ್ ಬೇ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತವಾಗಿ ಮುಗಿಸಲು ಸೂಚನೆ.
  • ಪಾದಚಾರಿಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಸೂಚನೆ.
  • ಬಸ್ ನಿಲ್ದಾಣದ ಸ್ಥಳದಲ್ಲೇ ಬಸ್ ನಿಲುಗಡೆ ಮಾಡುವ ಸಲುವಾಗಿ ಬಿಎಂಟಿಸಿಯಿಂದ ಸಿಬ್ಬಂದಿ ನಿಯೋಜನೆ ಮಾಡಲು ಸೂಚನೆ.

ಹೊರ ವರ್ತುಲ ರಸ್ತೆ(ಇಕೋ ಸ್ಪೇಸ್) ಪರಿಶೀಲನೆ:

  • ಇಕೋಸ್ಪೇಸ್ ಬಳಿ ರಾಜ ಕಾಲುವೆಯ ಪುನರ್ ವಿನ್ಯಾಸ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ.
  • ಮಳೆ ನೀರು ಸರಾಗವಾಗಿ ಹರಿಯಲು ಪರ್ಯಾಯವಾಗಿ ಕ್ರಾಸ್ ಕಲ್ವರ್ಟ್ ಗಳನ್ನು ಮಾಡಲು ಸೂಚನೆ.
  • ಮಳೆ ನೀರು ರಸ್ತೆ ಮೇಲೆ‌ ನಿಲ್ಲದೆ ಸರಾಗವಾಗಿ ಹರಿದು ಹೋಗುವ ಸಲುವಾಗಿ ರಸ್ತೆ ಬದಿ 300 ಮೀಟರ್ ಉದ್ದದ ಪೈಪ್ ಲೈನ್ ಕಾಮಗಾರಿಯ ಪೈಕಿ ಈಗಾಗಲೇ 60 ಮೀಟರ್ ನಷ್ಟು ಕಾಮಗಾರಿ ಮುಗಿದಿದ್ದು, ಉಳಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ.
  • ಸದ್ಯ ಇರುವ ಪ್ರಮುಖ ನೀರುಗಾಲುವೆಗೆ ಅಳವಡಿಸಿರುವ 3 ಕೊಳವೆಗಳು ಚಿಕ್ಕದಾಗಿದ್ದು, ಅದನ್ನು ಅಗಲೀಕರಣ ಮಾಡಲು ಸೂಚನೆ.
  • ಮೇಲುಸೇತುವೆಯ ರ್ಯಾಂಪ್ ಕೆಳಭಾಗದ ಮೂಲಕ ನೇರವಾಗಿ ಮಳೆ ನೀರುಗಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ.
  • ಇಕೋ ಸ್ಪೇಸ್ ಆವರಣದ ಕೆ.ಇ.ಬಿ‌ ಸ್ಟೇಷನ್ ಬಳಿ ಇರುವ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಬ್ಲಾಕ್ ಮಾಡಲಾಗಿತ್ತು. ಆ ಒತ್ತುವರಿಯ ತೆರವು ಕಾರ್ಯಾಚರಣೆ ಮಾಡಲಾಗಿದ್ದು, ಮಳೆ‌ ನೀರು ಸರಾಗವಾಗಿ ಹರಿದು ಹೋಗುವ ದೃಷ್ಟಿಯಿಂದ ಕಾಲುವೆಯ ಮೇಲೆ ಅಳವಡಿಸಿರುವ ಕೆಲವು ಭಾಗದ ಸ್ಲ್ಯಾಬ್ ಅನ್ನು ತೆರವುಗೊಳಿಸಲು ಸೂಚನೆ.

ಇಬ್ಲೂರು ಜಂಕ್ಷನ್ ಪರಿಶೀಲನೆ:

  • ಜಂಕ್ಷನ್ ಮಧ್ಯಭಾಗದಲ್ಲಿ ನಿರ್ಮಿಸಿರುವ ಐಲ್ಯಾಂಡ್ ಅನ್ನು ಕಡಿಮೆ ಮಾಡಿ, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕಾಮಗಾರಿ ಮಾಡಲು ಸೂಚನೆ.
  • ಪಾದಚಾರಿ ಸುಗಮ ಸಂಚಾರಕ್ಕಾಗ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಲು ಸೂಚನೆ

ಜೆಡಿ ಮರ ಜಂಕ್ಷನ್ ಪರಿಶೀಲನೆ:

  • ರಸ್ತೆ ಬದಿಯ ಶೋಲ್ಡರ್ ಡ್ರೈನ್ ಕ್ಲೀನ್ ಮಾಡಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಸೂಚನೆ
  • ಪಾದಚಾರಿ ಮಾರ್ಗ ಸರಿಪಡಿಸಲು ಸೂಚನೆ

ಸಾರಕ್ಕಿ ಜಂಕ್ಷನ್ ಪರಿಶೀಲನೆ:

  • ಸಾರಕ್ಕಿ ಜಂಕ್ಷನ್ ನಲ್ಲಿ ಎರಡು ಕಡೆ ಈಗಾಗಲೇ ಫ್ರೀ ಲೆಪ್ಟ್ ಟರ್ನ್ ಮಾಡಲಾಗಿರುತ್ತದೆ
  • ಪಾದಚಾರಿ ಮಾರ್ಗದಲ್ಲಿ ಗ್ರಿಲ್ ಅಳವಡಿಕೆ ಮಾಡಲಾಗಿದೆ.
  • ಡಾಂಬರೀಕರಣ ಮಾಡಲಾಗಿದೆ.
  • ಸರ್ವೀಸ್ ರಸ್ತೆ ಭಾಗದಲ್ಲಿರುವ ಮರದ ಕೊಂಬೆಗಳನ್ನು ಕತ್ತರಿಸಿ ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಮಾಡಲು ಸೂಚನೆ

ಸುಮ್ಮನಹಳ್ಳಿ ಜಂಕ್ಷನ್:

  • ಶೌಚಾಲಯವನ್ನು ಕೂಡಲೆ ಸಾರ್ವಜನಿಕರ ಸೇವೆಗೆ ಒದಗಿಸಲು ಸೂಚನೆ.
  • ಪಾದಚಾರಿ ಮೇಲುಸೇತುವೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ.
  • ಮೇಲುಸೇತುವೆಯ ಕೆಳಭಾಗದಲ್ಲಿ ಕಿರು ಉದ್ಯಾನ ನಿರ್ಮಾಣ ಮಾಡಲು ಸೂಚನೆ.

ಗೊರಗುಂಟೆ ಪಾಳ್ಯ ಜಂಕ್ಷನ್:

  • ರಸ್ತೆ ಬದಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಗ್ರೇಟಿಂಗ್ಸ್ ಅಳವಡಿಸಲಾಗಿದೆ
  • ಪಾದಚಾರಿ ಮಾರ್ಗ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ
  • ಬಿಡಿಎ ವತಿಯಿಂದ ಅಳವಡಿಸುತ್ತಿರುವ ಸೈನ್ ಬೋರ್ಡ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ.
  • ಎತ್ತರಿಸಿದ ಪಾದವಾರಿ ಮಾರ್ಗದಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಆಗುತ್ತದೆ. ಆದ್ದರಿಂದ ಅದನ್ನು ಕಡಿಮೆ ಮಾಡಲು ಸೂಚನೆ.

ಈ ಸಂರ್ಭದಲ್ಲಿ ಪರಿಶೀಲನೆಯ ವಲಯ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಡಾ. ಹರೀಶ್ ಕುಮಾರ್, ಡಾ. ರಾಮ್ ಪ್ರಸಾತ್ ಮನೋಹರ್, ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ವೆಂಕಟಾ ಚಲಪತಿ, ನಾಗರಾಜ್, ಮುಖ್ಯ ಅಭಿಯಂತರರಾದ ಲೋಕೇಶ್, ಬಸವರಾಜ್ ಕಬಾಡೆ, ಶಶಿ ಕುಮಾರ್, ವಿಜಯ್ ಕುಮಾರ್, ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Related