ನಮ್ಮ ರಾಜ್ಯದ ಜನತೆಗೆ ಅನ್ಯಾಯವಾಗುತ್ತಿದೆ: ಪ್ರಜ್ವಲ್ ರೇವಣ್ಣ

ನಮ್ಮ ರಾಜ್ಯದ ಜನತೆಗೆ ಅನ್ಯಾಯವಾಗುತ್ತಿದೆ: ಪ್ರಜ್ವಲ್ ರೇವಣ್ಣ

ಹಾಸನ: ನಮ್ಮ ಕರ್ನಾಟಕ ರಾಜ್ಯದಲ್ಲಿ ಕನ್ನಡ ಮಣ್ಣಿನ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಬೇರೆ ದೇಶದವರು ನಮ್ಮ ಕರ್ನಾಟಕದಲ್ಲಿ ಜಮೀನು ಖರೀದಿಸಿ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಿ, ಬೇರೆ ದೇಶದವರು ಕೋಟಿ ಕೋಟಿ ಗಟ್ಟಲೆ ಹಣ ಗಳಿಸುತ್ತಿದ್ದರು ಕೂಡ ನಮ್ಮ ಕರ್ನಾಟಕದ ಜನತೆಗೆ ಇದರ ಉಪಯೋಗವಾಗುತ್ತಿಲ್ಲ ಮತ್ತು ನಮ್ಮ ಕನ್ನಡ ನಾಡಿನ ಜನತೆಗೆ ಅನ್ಯಾಯವಾಗುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರು ಆಗ್ರಹಿಸಿದ್ದಾರೆ. ಹಾಸನದ ಕೈಗಾರಿಕೆಗಳಿಂದ ಸ್ಥಳೀಯ ಕನ್ನಡಿಗರಿಗೆ ಅನ್ಯಾಯ ಆಗುತ್ತಿರುವ ಆರೋಪ ಕೇಳಿ ಬಂದಿದೆ.

ಹೊರ ರಾಜ್ಯಗಳಿಂದ ಬಂದು ನಮ್ಮ ರಾಜ್ಯಗಳಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿ ನಮ್ಮ ರಾಜ್ಯದ ಜನತೆಗೆ ಕೆಲಸ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ನಮ್ಮ ರಾಜ್ಯದ ಜನತೆಗೆ ಅನ್ಯಾಯವಾಗುತ್ತಿದೆ ಇದನ್ನು ನಾವು ಖಂಡಿಸಲೇಬೇಕು ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಆದೇಶವಿದ್ದರೂ ಹೊರ ರಾಜ್ಯದ ನೌಕರರನ್ನೇ ಕಾರ್ಖಾನೆಗಳು ಬಳಸಿಕೊಳ್ಳುತ್ತಿವೆ. ಹಾಸನದ ಕೈಗಾರಿಕಾ ವಲಯದಲ್ಲಿರುವ ಹಿಮತ್ ಸಿಂಗ್ ಕಾ ಕಾರ್ಖಾನೆ ಸೇರಿ ವಿವಿಧ ಗಾರ್ಮೆಂಟ್ಸ್ ಉದ್ಯಮದ ಕೈಗಾರಿಕೆಗಳ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಸುಮಾರು 300 ಎಕರೆಗೂ ಹೆಚ್ಚು ಭೂಮಿ ಪಡೆದು ಹೊರ ರಾಜ್ಯದ ಉದ್ಯಮಿಗಳು ನಮ್ಮಲ್ಲಿ ಕಾರ್ಖಾನೆ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಸುಮಾರು 430ಕೋಟಿ‌ ಹಣ ರಿಯಾಯಿತಿ ಪಡೆದಿರೋ ಹಿಮತ್ ಸಿಂಕಾ ಕಾರ್ಖಾನೆ ರಾಜ್ಯದ ಅನುಕೂಲ ಪಡೆದು ಸ್ಥಳೀಯರಿಗೆ ಅವಕಾಶವನ್ನೇ ನೀಡುತ್ತಿಲ್ಲ.

ಸರೋಜಿನಿ ಮಹಿಷಿ ವರದಿಯನ್ನೂ ಗಾಳಿಗೆ ತೂರಿದ್ದಾರೆ ಎಂದು ಜೆಡಿಎಸ್ ನಾಯಕರು ಆರೋಪ ಮಾಡಿದ್ದಾರೆ. ಸಾವಿರಾರು ಹೊರ ರಾಜ್ಯದ ಯುವಕರಿಗೆ ಮಾತ್ರ ಉದ್ಯೋಗಕ್ಕೆ ಆಧ್ಯತೆ ನೀಡಲಾಗಿದೆ. ಕೈಗಾರಿಕಾ ವಲಯಕ್ಕೆ ಭೂಮಿ ಕಳೆದುಕೊಂಡು ಸ್ಥಳೀಯ ರೈತರು ಗೋಳಾಡುತ್ತಿದ್ದಾರೆ. ತಮ್ಮ ಮಕ್ಕಳಿಗೆ ಕೆಲಸವಿಲ್ಲದೆ ನಿರುದ್ಯೋಗ ಅನುಭವಿಸುತ್ತಿದ್ದಾರೆ. ಉದ್ಯೋಗ ನೀಡದ ಕೈಗಾರಿಕೆಗಳ ವಿರುದ್ದ ಕ್ರಮಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದ್ದಾರೆ.

 

Related