ಸಿಸಿಬಿಯಿಂದ ಇಂದ್ರಜಿತ್ ವಿಚಾರಣೆ

ಸಿಸಿಬಿಯಿಂದ ಇಂದ್ರಜಿತ್ ವಿಚಾರಣೆ

ಬೆಂಗಳೂರು : ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಮುಂದೆ ವಿಚಾರಣೆ ಆರಂಭವಾಗಿದೆ.

ಸಿಸಿಬಿ ಕಚೇರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್, ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳ ಜೊತೆ ಮೊದಲು ಮಾತನಾಡಿ, ನನಗೆ ಯಾರಿಂದಲೂ ಯಾವುದೇ ರೀತಿ ಒತ್ತಡ ಇಲ್ಲ. ಯಾರಿಗೂ ನಾನು ಹೆದರುವುದೂ ಇಲ್ಲ. ಎಂದು ಮಾಹಿತಿ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದರು.

ಇನ್ನು ಸಿಸಿಬಿ ಅಧಿಕಾರಿಗಳು ದೆಹಲಿ ಎನ್.ಸಿ.ಬಿ. ಅಧಿಕಾರಿಗಳ ಮಾರ್ಗ ದರ್ಶನದಂತೆ ಇಂದ್ರಜಿತ್ ಲಂಕೇಶ್ ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಬಿ ಅಧಿಕಾರಿಗಳಿಗೆ ಕರ್ನಾಟಕ ಡ್ರಗ್ಸ್ ಪೆಡ್ಲರ್ ಆಪರೇಷನ್ ಪ್ರಮುಖ ಅಧಿಕಾರಿ ಕೆಪಿಎಸ್ ಮಲ್ಹೋತ್ರಾ ಗೈಡ್ ಮಾಡುತ್ತಿದ್ದು, ಅವರ ಸೂಚನೆ ಪ್ರಕಾರ ಇಂದ್ರಜಿತ್ ವಿಚಾರಣೆ ಆರಂಭವಾಗಿದೆ.

ಸ್ಯಾಂಡಲ್‌ವುಡ್‌ನ ಯಾವೆಲ್ಲ ನಟ, ನಟಿಯರು, ಸಂಗೀತ ನಿರ್ದೇಶಕರ ಹೆಸರುಗಳನ್ನು ಇಂದ್ರಜಿತ್ ಸಿಸಿಬಿ ಮುಂದೆ ಬಹಿರಂಗಪಡಿಸಲಿದ್ದಾರೆ. ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮನೆ ಮಾಡಿದೆ.

Related