ದಿಢೀರ್ ಇಂದಿರಾ ಕ್ಯಾಂಟೀನ್ ಬಂದ್

ದಿಢೀರ್  ಇಂದಿರಾ ಕ್ಯಾಂಟೀನ್ ಬಂದ್

ಬೆಂಗಳೂರು, ಮಾ. 24 : ದಿಢೀರ್ ಇಂದಿರಾ ಕ್ಯಾಂಟೀನನ್ನು ತೆರೆಯದಿರುವುದಕ್ಕೆ ಸರ್ಕಾರ ನಿರ್ಧರಿಸಿದೆ. ಕೊರೊನಾ ಹಿನ್ನೆಲೆ ರಾಜ್ಯಾದ್ಯಂತ ಲಾಕ್ಡೌನ್ ಇರುವುದರಿಂದ ಬಡವರಿಗೆ ಅನುಕೂಲವಾಗಲಿ ಎಂದು ಇಂದಿರಾ ಕ್ಯಾಂಟೀನ್ನಲ್ಲಿ ಊಟ, ತಿಂಡಿ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ನೂಕುನುಗ್ಗಲು ಆಗುವ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ತೆರೆಯದೇ ಇರಲು ನಿರ್ಧರಿಸಲಾಗಿದೆ.
ಸಿಎಂ ಯಡಿಯೂರಪ್ಪ ಅಧಿಕೃತ ಹೇಳಿಕೆ ನೀಡಿದ್ದು, ಬೆಂಗಳೂರಿನಲ್ಲಿ ಮಾತನಾಡಿ, ಜನರು ಯುಗಾದಿ ಹಬ್ಬವನ್ನು ಮನೆಯಲ್ಲೇ ಆಚರಿಸಿ, ಆಡಂಬರದ ಹಬ್ಬ ಆಚರಣೆ ಮಾಡುವುದು ಬೇಡ ಎಂದು ಮನವಿ ಮಾಡಿಕೊಂಡರು. ಯುಗಾದಿ ಹಬ್ಬಕ್ಕಾಗಿ ವಸ್ತುಗಳನ್ನು ಖರೀದಿ ಮಾಡುವುದಕ್ಕಮಾರ್ಕೆಟ್ಗಳಿಗೆ ಹೋಗುವುದು ಬೇಡ ಎಂದು ವಿನಂತಿ ಮಾಡಿದ್ದಾರೆ. ಸಮಸ್ತ ನಾಗರಿಕ ಬಂಧುಗಳ ಗಮನಕ್ಕೆ ಬೆಂಗಳೂರಿನಲ್ಲಿ ಕೆಲವೆಡೆ ಎಂದಿನಂತೆ ಜನಸಂದಣಿ ಅನಗತ್ಯವಾಗಿ ಸೇರುತ್ತಿರುವುದು ಸರಿಯಲ್ಲ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಲು, ಹಣ್ಣು, ತರಕಾರಿ ಪೂರೈಕೆಗೆ ಪೊಲೀಸರು ಅಡ್ಡಿ ಪಡಿಸಬಾರದು, ರಾಜ್ಯದಲ್ಲಿ ಕರ್ಪ್ಯೂ ವಾತಾವರಣ ಇರುವುದರಿಂದ ಜನರು ಕಾರಿನಲ್ಲಿ, ದ್ವಿಚಕ್ರ ವಾಹನದಲ್ಲಿ ಓಡಾಟನಡೆಸಬಾರದು. ಒಂದು ವೇಳೆ ವಿನಾಕಾರಣ ಮನೆಯಿಂದ ಹೊರಗಡೆ ಬಂದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

Related