ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಳ..!

  • In Crime
  • July 18, 2022
  • 244 Views
ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಳ..!

ತಿರುವನಂತಪುರಂ, ಜು 18 : ಕೇರಳದಲ್ಲಿ 2ನೇ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ಈ ಮೂಲಕ ಭಾರತದ 2ನೇ ಮಂಕಿಪಾಕ್ಸ್ ಪ್ರಕರಣ ಖಚಿತಪಟ್ಟಂತಾಗಿದೆ.  ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ದೇಶದ ಮಂಕಿಪಾಕ್ಸ್​ನ 2ನೇ ಪ್ರಕರಣ ದಾಖಲಾಗಿದೆ. ಈ ಮುನ್ನವೂ ಕೇರಳದಲ್ಲಿಯೇ ಮೊದಲ ಪ್ರಕರಣ ಪತ್ತೆಯಾಗಿತ್ತು.  ಇಂದು ಬೆಳಗ್ಗೆಯಷ್ಟೇ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು.

ಸೌದಿ ಅರೇಬಿಯಾದಿಂದ ಪೋಷಕರೊಂದಿಗೆ ವಿಜಯವಾಡಕ್ಕೆ ವಾಪಸ್ಸಾಗಿದ್ದ ಬಾಲಕನಲ್ಲಿ  ಮಂಕಿಪಾಕ್ಸ್ನ ರೋಗ ಲಕ್ಷಣ ಕಂಡುಬಂದಿತ್ತು. ವಿಜಯವಾಡದಲ್ಲಿ ಭಾರತದ 2ನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗುವ ಆತಂಕ ಹೆಚ್ಚಿತ್ತು, ಆದರೆ ಅದಕ್ಕೂ ಮುನ್ನವೇ ಕೇರಳದ ಕಣ್ಣೂರಿನಲ್ಲಿಯೇ 2ನೇ ಕೊವಿಡ್ ಪ್ರಕರಣ ಖಚಿತಗೊಂಡಿದೆ.

ಕೇರಳದಲ್ಲಿ ಪತ್ತೆಯಾಗಿದ್ದ ಮೊದಲ ಪ್ರಕರಣ:
ಕೇರಳದ ಕೊಲ್ಲಂ ಜಿಲ್ಲೆಯ 35 ವರ್ಷದ ವ್ಯಕ್ತಿಯಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು. ಮಂಕಿಪಾಕ್ಸ್ ದೃಢಪಟ್ಟ ವ್ಯಕ್ತಿ ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳ ಆರೋಗ್ಯ ಸಚಿವ ವೀನಾ ಜಾರ್ಜ್ ಈಗಾಗಲೇ ತುರ್ತು ಸಭೆ ನಡೆಸಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ತಪಾಸನೆ ನಡೆಸುವಂತೆ ಸೂಚಿಸಿದ್ದಾರೆ. ವಿದೇಶದಿಂದ ಆಗಮಿಸುವವರ ಬಗ್ಗೆ ನಿಗಾ ಇಡಲು ಸೂಚಿಸಲಾಗಿದೆ.

Related