ಎಂಜೆ ಪ್ರೊಡೆಕ್ಷನ್ಸ್‌ ಸಿನೆಮಾ ನಿರ್ಮಾಣ ಕಂಪನಿ ಉದ್ಘಾಟನೆ

ಎಂಜೆ ಪ್ರೊಡೆಕ್ಷನ್ಸ್‌ ಸಿನೆಮಾ ನಿರ್ಮಾಣ ಕಂಪನಿ ಉದ್ಘಾಟನೆ

ಆನೇಕಲ್ : ಕನ್ನಡ ಸಿನೆಮಾ ರಂಗ ರಾಷ್ಟ್ರಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಗುಣಮಟ್ಟದ, ಪರಿಣಾಮಕಾರಿ ಹಾಗೂ ಸೃಜನಶೀಲತೆಯ ಸಿನೆಮಾಗಳನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ನಟ ಶರಣ್‌ ಮಾತನಾಡಿದರು. ಸಿನೆಮಾ ಮೇಲಿನ ನಂಬಿಕೆ ಮತ್ತು ಪ್ರೀತಿ ಪ್ರೊಡೆಕ್ಷನ್‌ ಸಂಸ್ಥೆಗಳ ಯಶಸ್ಸಿಗೆ ಕಾರಣವಾಗುತ್ತದೆ. ಸಿನೆಮಾ ರಂಗದಲ್ಲಿ 40ನೇ ವಯಸ್ಸಿಗೆ ನಾಯಕನಾದೆ, ಅಲ್ಲಿಯವರೆಗೂ ಕಿರುತೆರೆ ಮತ್ತು ಸಣ್ಣ ಪಾತ್ರಗಳಲ್ಲಿ ಅಭಿನಯ ಮಾಡುತ್ತಿದೆ. ಅವಕಾಶಗಳು ದೊರೆತಾಗ ಸದುಪಯೋಗ ಮಾಡಿಕೊಳ್ಳಬೇಕು. ಅವಕಾಶಗಳಿಗಾಗಿ ತಾಳ್ಮೆಯಿಂದ ಕಾಯುವ ಮನೋಭಾವನೆಯನ್ನು ಪ್ರತಿಯೊಬ್ಬ ಕಲಾವಿದರು ಬೆಳೆಸಿಕೊಳ್ಳಬೇಕು ಎಂದರು.

ಎಂಜೆ ಪ್ರೊಡೆಕ್ಷನ್ಸ್‌ನ ಮುಖ್ಯಸ್ಥ ಅನಿಲ್‌ ಮಾತನಾಡಿ ಕೇರಳದಲ್ಲಿ ಜನಿಸಿದರೂ ಕರ್ನಾಟಕ ನಮ್ಮೆಲ್ಲ ಅಭಿವೃದ್ಧಿಗೆ ಕರ್ಮಭೂಮಿಯಾಗಿದೆ. ಕನ್ನಡ ಭಾಷೆ ಮತ್ತು ಕರ್ನಾಟಕದ ಮೇಲಿನ ಅಭಿಮಾನದಿಂದ ಇಲ್ಲಿ ಚಲನಚಿತ್ರ ಪೊಡೆಕ್ಷನ್‌ ಹೌಸ್‌ನ್ನು ನಿರ್ಮಿಸಲಾಗಿದೆ. ಅತ್ಯಾಧಯನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕುಟುಂಬ ಸಮೇತ ನೋಡುವಂತಹ ಚಲನಚಿತ್ರಗಳ ನಿರ್ಮಾಣ ಮತ್ತು ಸ್ಪೂರ್ತಿ ನೀಡುವ ಚಲನಚಿತ್ರಗಳನ್ನು ನಿರ್ಮಿಸುವ ಗುರಿಹೊಂದಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್‌, ನಟಿ ಸಪ್ತಮಿಗೌಡ, ಎಂಜೆ ಪ್ರೊಡೆಕ್ಷನ್ಸ್‌ನ ಉಪಾಧ್ಯಕ್ಷ ಸತೀಶ್‌ಕುಮಾರ್, ಎಡಿ ಗ್ರೂಪ್ಸ್‌ನ ಸಿಇಓ ಮುಖೇಶ್‌ ನಾಯರ್‌, ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಮಣ್ಯ, ಚಲನಚಿತ್ರ ನಿರ್ದೇಶಕ ಹರಿ ಸಂತು ಮತ್ತಿತರರು ಉಪಸ್ಥಿತರಿದ್ದರು.

Related