ಸಮಸ್ಯೆಗಳ ಸುಳಿಯಲ್ಲಿ ಸ್ಮಾರ್ಟ್ಸಿಟಿ

  • In State
  • February 25, 2020
  • 394 Views
ಸಮಸ್ಯೆಗಳ ಸುಳಿಯಲ್ಲಿ ಸ್ಮಾರ್ಟ್ಸಿಟಿ

ಪ್ರಜಾವಾಹಿನಿ-ತುಮಕೂರು  : ಸ್ಮಾರ್ಟ್ ಸಿಟಿ ಹೆಸರಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಸಾರ್ವಜನಿಕರನ್ನು ಮೃತ್ಯು ಕೂಪಕ್ಕೆ ದೂಡುತ್ತಿವೆಯೋ ಎನ್ನುವ ಆತಂಕ ನಗರದ ನಿವಾಸಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಪ್ರತಿ ದಿನ ಜೀವದ ಹಂಗು ತೊರೆದು ಓಡಾಡುವಂತಹ ಅಹಿತಕರ ಪರಿಸ್ಥಿತಿ ನಿರ್ಮಾಣವಾಗಿದ್ದು ಜೀವಭಯದಿಂದಲೇ ಪ್ರತಿನಿತ್ಯದ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ.

ಹೀಗಾಗಿ ೬೦ ಅಡಿ ಇದ್ದ ಕಾರಿಯಪ್ಪ ರಸ್ತೆ ಕೇವಲ ೨೨ ಅಡಿಗೆ ಸೀಮಿತವಾಗುತ್ತದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುವುದರ ಜತೆಗೆ ಪ್ರತಿ ನಿತ್ಯವೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಮಾಡುತ್ತಿರುವ ಕಾಮಗಾರಿಗಳು ಭವಿಷ್ಯದಲ್ಲಿ ಅನುಕೂಲ ಕಲ್ಪಿಸಬೇಕು. ಆದರೆ ಇಲ್ಲಿನ ಯೋಜನೆಗಳನ್ನು ಗಮನಿಸಿದರೆ ಮುಂದೆ ಸಮಸ್ಯೆಯ ಸರಮಾಲೆಯನ್ನೇ ಎದುರಿಸಬೇಕಾಗುವ ಅಪಾಯವಿದೆ.ಈ ರಸ್ತೆ ನಗರದ ಮಧ್ಯ ಭಾಗದಲ್ಲಿರುವುದರಿಂದ ಇತರ ಕೆಲ ಪ್ರದೇಶಗಳಿಗೆ ತೆರಳಲು ಇಲ್ಲಿಂದಲೇ ತೆರಳಬೇಕು. ಬಾರ್ಲೈನ್ ರಸ್ತೆಯಿಂದ ಎಂಜಿ ರಸ್ತೆಯಲ್ಲಿ ಎರಡು ಕಡೆ ವಾಹನ ನಿಲುಗಡೆ ಪ್ರದೇಶ ನಿರ್ಮಿಸಲಾಗಿದೆ. ಆದರೆ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನ ನಿಲ್ಲಿಸುವುದೇ ಕಡಿಮೆ. ರಸ್ತೆ ಬದಿಗಳಲ್ಲಿ ಸಾರ್ವಜನಿಕರು ವಾಹನ ನಿಲ್ಲಿಸುವುದರಿಂದ ಇಡೀ ರಸ್ತೆ ಕಿಷ್ಕಿಂದೆಯAತಾಗುತ್ತದೆ.

ವ್ಯಾಪಾರಿಗಳ ಗೋಳು ಅಯೋಮಯ : ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿರುವ ಮಳಿಗೆಗಳಲ್ಲಿ ವ್ಯಾಪಾರ ಕ್ಷೀಣಿಸಿದೆ ರಸ್ತೆ ಬದಿ ವ್ಯಾಪಾರಿಗಳು ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವ್ಯಾಪಾರಿಗಳಂತೂ ತಣ್ಣೀರು ಕುಡಿದು ಮಲಗುವಂತಾಗಿದೆ. ಪ್ರತಿನಿತ್ಯ ಪರದಾಡುವಂತಾಗಿದೆ ಇದರ ನಡುವೆ ಪೊಲೀಸರ ಕಾಟ ಜೀವನ ನಡೆಸುವುದೇ ಕಷ್ಟವಾಗಿದೆ.

ಧೂಳುಮಯ : ಕಾಮಗಾರಿಯಿಂದಾಗಿ ಇಡೀ ಪ್ರದೇಶವೇ ಧೂಳುಮಯವಾಗಿರುವುದರಿಂದ ರೋಗ ರುಜಿನಗಳು ಬರುವ ಸಾಧ್ಯತೆ ಹೆಚ್ಚಿದೆ. ಈ ಭಾಗದಲ್ಲಿ ಓಡಾಡುವವರು ಮಾಸ್ಕ್ ಹಾಕಿಕೊಂಡೇ ಓಡಾಡುವಂತಾಗಿದೆ. ಮಳೆ ನೀರು ಸರಾಗವಾಗಿ ಹರಿಯಲು ಸೌಲಭ್ಯ ಕಲ್ಪಿಸದಿರುವುದರಿಂದ ರಸ್ತೆಯಲ್ಲೇ ನೀರು ನಿಲ್ಲುವಂತಾಗಿದೆ. ಕೆಲಸ ಮುಗಿದಿರುವ ಪ್ರದೇಶಗಳಲ್ಲಿ ಪಾದಾಚಾರಿ ಮಾರ್ಗ ನಿರ್ಮಿಸಿರುವುದರಿಂದ ಈ ರಸ್ತೆಯಲ್ಲಿ ಚರಂಡಿ ನಿರ್ಮಾಣ ಮಾಡುವುದಿಲ್ಲ ಎನ್ನುವುದು ಖಚಿತಪಟ್ಟಿದೆ. ಇದೇ ರೀತಿ ಕಾಮಗಾರಿ ನಡೆದರೆ ಮಳೆಗಾಲದಲ್ಲಿ ಈ ರಸ್ತೆ ಕೆರೆಯಾಗಿ ಪರಿವರ್ತನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಆಯುಕ್ತರ ಭರವಸೆ : ಬಾರ್‌ಲೈನ್ ರಸ್ತೆಯಲ್ಲಿ ಪಾದಾಚಾರಿಗಳ ರಸ್ತೆ ಅಳತೆ ಹೆಚ್ಚಾಗಿದ್ದು, ರಸ್ತೆ ಕಿರಿದಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಮೇಯರ್ ವೀಕ್ಷಣೆ ಮಾಡಿ ಮಾಹಿತಿ ನೀಡಿದ್ದಾರೆ. ಸದ್ಯದಲ್ಲೇ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ಪ್ರಜಾವಹಿನಿಗೆ ದೂರವಾಣಿಯಲ್ಲಿ ಭರವಸೆ ನೀಡಿದ್ದಾರೆ.

Related