ವಿರಾಜಪೇಟೆಯಲ್ಲಿ ವ್ಯಾಘ್ರ ಪ್ರತ್ಯಕ್ಷ

ವಿರಾಜಪೇಟೆಯಲ್ಲಿ ವ್ಯಾಘ್ರ ಪ್ರತ್ಯಕ್ಷ

ವಿರಾಜಪೇಟೆ: ಕೊಡಗಿನ ವಿರಾಜಪೇಟೆ ರಸ್ತೆಯ ಬದಿಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಮಲಗಿರುವುದು ಕಂಡುಬಂದಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ಅರಣ್ಯ ವ್ಯಾಪ್ತಿಯ ರಸ್ತೆ ಬದಿಯಲ್ಲೇ ಹುಲಿ ಮಲಗಿರುವುದು ಕಂಡ ಸ್ಥಳೀಯರೊಬ್ಬರು ಈ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಹುಲಿ ಸಂರಕ್ಷಣಾ ವಲಯದಿಂದ ಹುಲಿ ಕುಟುಂಬ ಬಂದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Related