ಗಂಗಸದ್ರ ಕೆರೆಯಲ್ಲಿ ನೀರಕ್ಕಿಗಳ ಕಲರವ

ಗಂಗಸದ್ರ ಕೆರೆಯಲ್ಲಿ ನೀರಕ್ಕಿಗಳ ಕಲರವ

ಪ್ರಜಾವಾಹಿನಿ-ತುಮಕೂರು : ನಗರಕ್ಕೆ ಹೊಂದಿಕೊಡಿರುವ ಗಂಗಸದ್ರ ಅಮಾನಿಕೆರೆಗೆ ಹಲವು ಬಗೆಯ ನೀರಕ್ಕಿಗಳು ಆಗಮಿಸಿದ್ದು, ಸ್ವಚ್ಛಂದ ವಿಹಾರದಲ್ಲಿ ಮಿಳಿತಗೊಂಡಿವೆ. ವಿಶಾಲವಾದ ಗಂಗಸAದ್ರ ಕೆರೆಯುದ್ದಕ್ಕೂ ಈ ಬಾರಿ ನೀರು ಹೆಚ್ಚು ಸಂಗ್ರಹವಾಗಿದೆ. ಇದು ಪಕ್ಷಿಗಳ ಸಂತಾನೋತ್ಪತ್ತಿಗೆ ವರದಾನವಾಗಿದ್ದು, ಪಕ್ಷಿಗಳ ಲೋಕವೇ ಸೃಷ್ಟಿಯಾಗಿದೆ. ಸುಮಾರು ೫೦ಕ್ಕೂ ಅಧಿಕ ತಳಿಗಳ ನೀರಕ್ಕಿಗಳ ಕಲರವ ನೋಡಲು ಮನೋಹರವಾಗಿ ಈ ಬಾರಿ ಕಂಡು ಬಂದಿದ್ದು ನೋಡುಗರಿ ಮನಮೋಹಕ ದೃಷ್ಯ ಕಣ್ಮನ ಸೂರೆಗೊಳ್ಳುತ್ತಿವೆ.
ಪಕ್ಷಿ ಪ್ರಿಯರಿಗೆ ಸಂತಸ
ಗಗಸದ್ರ ಕೆರೆಗೆ ಪೆಲಿಕಾನ್ ಬಂದಿರುವುದು ಪಕ್ಷಿ ಪ್ರಿಯರ ಸಂತಸಕ್ಕೆ ಕಾರಣವಾಗಿದೆ. ತನ್ನ ತೊಟ್ಟಿಲಿನಂತ ಬಾಯಿಯನ್ನು ತೆರೆದು ನೀರಲ್ಲಿ ಮೂತಿ ಮುಳುಗಿಸಿ ಮೀನು ಹಿಡಿಯುವ ಪೆಲಿಕಾನ್ ಬಹಳ ಆಕರ್ಷಣೆಯ ಪಕ್ಷಿ. ಈ ಪೆಲಿಕಾನ್ ನೋಡಲೆಂದೇ ತುಮಕೂರಿನ ಪಕ್ಷಿ ಪ್ರಿಯರು ಮೈಸೂರಿಗೆ ಹೋಗಿ ಬರುತ್ತಾರೆ. ಆದರೆ ಈ ಬಾರಿ ಗಂಗಸAದ್ರ ಕೆರೆಯಲ್ಲಿಯೇ ಅವುಗಳು ಕಲರವ ಸೃಷ್ಟಿಸಿವೆ.
ಇದರ ಜತೆಗೆ ಪೇಂಟೆಡ್ ಸ್ಟಾರ್ಕ್, ಕಾಮನ್ ಕೂಟ್, ಲಿಟಲ್ ಗ್ರೇಬ್, ಬ್ಲಾಕ್ ಹೆಡೆಡ್ ಐಬೀಸ್, ಬ್ಲಾಕ್ ಐಬೀಸ್, ಸ್ಯಾಂಡ್ ಪೈಪರ್, ಗ್ರೇಟ್ ಎಗ್ರೇಟ್, ಸ್ಯಾಂಡ್ ಫ್ಲೋವರ್, ಗ್ರೇ ಹೆರಾನ್, ಪಾಂಡ್ ಹೆರಾನ್, ಲಿಟಲ್ ಪರ್ಪಲ್ ಹೆರಾನ್, ರೆಡ್ ವಾಟ್ಲೆಡ್ ಲ್ಯಾಪ್ ವಿಂಗ್, ಬಿಟರೆನ್, ಕಾರ್ಮೊ ರೆಂಟ್, ಇಂಡಿಯನ್ ಸ್ಪಾಟ್ ಬಿಲ್ಲಡ್ ಡಕ್, ಬ್ಲಾಕ್ ವಿಂಗಡ್ ಸ್ಟಿಲ್ಟ್, ವಾಟರ್ ಹೆನ್, ಕಾಮನ್ ಮೂರ್ಹೆನ್, ಇತ್ಯಾದಿ ೫೦ಕ್ಕೂ ಅಧಿಕ ಬಗೆಯ ನೀರಿನ ಪಕ್ಷಿಗಳು ವಿಹರಿಸುತ್ತಿವೆ.
ಪೆಲಿಕಾನ್, ಗ್ರೇ ಹೆರಾನ್, ಕಾರ್ಮೋರೆಂಟ್ಗಳು ದೊಡ್ಡ ಮೀನುಗಳನ್ನು ಹಿಡಿದು ತಿನ್ನುತ್ತವೆ. ಅವುಗಳ ಮೀನು ಶಿಕಾರಿಯನ್ನು ನೋಡುವುದೇ ಒಂದು ಆನಂದ. ಉಳಿದ ಪಕ್ಷಿಗಳು ಮೀನಿನ ಮರಿಗಳು, ಕೆರೆಯಲ್ಲಿಸಿಗುವ ಸಣ್ಣಪುಟ್ಟ ಹುಳು ಹುಪ್ಪಟೆ ಹಿಡಿದು ಸೇವಿಸುತ್ತವೆ.
ಪಕ್ಷಿಗಳ ಸೌಂದರ್ಯ ಸವಿಯ ಬನ್ನಿ
ಜನರು ಈ ಪಕ್ಷಿಗಳ ಸಹಜ ಜೀವನಕ್ಕೆ ತೊಂದರೆಯಾಗದತೆ ಅವುಗಳನ್ನು ವೀಕ್ಷಿಸಿ ಸೌಂದರ್ಯ ಸವಿಯಬಹುದು. ಕೆರೆಗೆ ಇಳಿಯದೆ, ದಡದಲ್ಲಿ ನಿಂತು ವೀಕ್ಷಿಸಬೇಕು. ಕೆರೆಗೆ ಇಳಿಯಬಾರದು. ಮೀನುಗಳಿಗೆಂದು ಎಣ್ಣೆಯಿಂದ ಕರಿದ ತಿಂಡಿಗಳನ್ನು ಎಸೆಯಬಾರದು. ಕೆರೆಯಂಗಳದಲ್ಲಿ ಕಿರುಚಾಟ ಮಾಡಿದಲ್ಲಿ ಪಕ್ಷಿಗಳು ದೂರ ಹೋಗುತ್ತವೆ. ಹಾಗಾಗಿ ಶಾಂತವಾಗಿದ್ದಷ್ಟು ಪಕ್ಷಿಗಳನ್ನು ಹತ್ತಿರದಿಂದ ನೋಡಬಹುದು. ಮಕ್ಕಳನ್ನು ಕರೆದೊಯ್ದು ಪರಿಸರ, ಪ್ರಾಣಿ ಪಕ್ಷಿಗಳ ಬಗ್ಗೆ ಆಸಕ್ತಿ, ಪ್ರೀತಿ ಮೂಡುವಂತೆ ಮಾಡಬಹುದು.

Related