ಬಿಜೆಪಿಗೆ ಮತ ನೀಡಿದರೆ ಹೆಣ್ಣು ಮಕ್ಕಳು ಮತ್ತೆ ಬಸ್ಗೆ ಹಣ ನೀಡಿ ಟಿಕೆಟ್ ಪಡೆಯಬೇಕಾಗುತ್ತದೆ: ಪ್ರದೀಪ್ ಈಶ್ವರ್

ಬಿಜೆಪಿಗೆ ಮತ ನೀಡಿದರೆ ಹೆಣ್ಣು ಮಕ್ಕಳು ಮತ್ತೆ ಬಸ್ಗೆ ಹಣ ನೀಡಿ ಟಿಕೆಟ್ ಪಡೆಯಬೇಕಾಗುತ್ತದೆ: ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರವರು ಚಿಕ್ಕಬಳ್ಳಾಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಕ್ಷಾ ರಾಮಯ್ಯ ಅವರ ಪರವಾಗಿ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ.

ಕಾಂಗ್ರೆಸ್ ಪಕ್ಷವು ಇಡೀ ರಾಜ್ಯದಾದ್ಯಂತ ಎಲ್ಲಾ ಸಾರ್ವಜನಿಕರಿಗೂ ಐದು ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ. 5 ಕೆಜಿ ಅಕ್ಕಿ ಕೊಡುವುದರ ಜೊತೆಗೆ 5 ಕೆಜಿ ಅಕ್ಕಿಗೆ ದುಡ್ಡು ಕೊಡುತ್ತಿದ್ದೇವೆ.

ಬಿಜೆಪಿ ಕೇಂದ್ರ ಸರ್ಕಾರಕ್ಕೆ ನಾವು ಪ್ರತಿ ಕೆಜಿ ಅಕ್ಕಿಗೆ 36 ರೂಪಾಯಿಯಂತೆ ನೀಡುತ್ತಿದ್ದೇವೆ. ಇನ್ನು ಪ್ರತಿಯೊಬ್ಬ ಮನೆ ಯಜಮಾನಗೆ ಪ್ರತಿ ತಿಂಗಳು 2000 ನೀಡುತ್ತಿದ್ದೇವೆ. ಹಾಗಾಗಿ ದಯಮಾಡಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಮತ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಕ್ಕಂದಿರೆ ಕೇಳಿ….ನೀವೇನಾದ್ರೂ ಅಪ್ಪಿ ತಪ್ಪಿ ಬಿಜೆಪಿಗೆ ವೋಟ್ ಹಾಕಿದ್ರೆ ನೀವು ಮತ್ತೆ ಬಸ್ಸಿನಲ್ಲಿ ಓಡಾಡಬೇಕಾದರೆ ಟಿಕೆಟ್ ಹಣ ನೀಡಿ ಓಡಾಡಬೇಕಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬೇಡಿ ಎಂದು ಸಾರ್ವಜನಿಕಾಲದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಬಿಜೆಪಿಗೆ ವೋಟ್ ಹಾಕಬೇಡಿ, ಕಾಂಗ್ರೆಸ್ಸಿಗೆ ವೋಟ್ ಹಾಕಿ ನೀವೇನಾದರೂ ಬಿಜೆಪಿಗೆ ವೋಟ್ ಹಾಕಿದರೆ ಐದು ಗ್ಯಾರಂಟಿಗಳು ರದ್ದಾಗುವ ಚಾನ್ಸಸ್ ಇದೆ ಹಾಗಾಗಿ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿದೆ ಅದೇ ರೀತಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಇರಬೇಕೆಂದರೆ ನೀವೆಲ್ಲ ಕಾಂಗ್ರೆಸ್ ಗೆ ಮತ ನೀಡಬೇಕೆಂದು ಮನವಿ ಮಾಡಿದರು.

‘ಯುವಕರು ಬರಬೇಕು, ಇವತ್ತು ಶರತ್ ಅಣ್ಣಾ ಬಂದಿರೋದಕ್ಕೆ ಒಂದು ಕೋಟಿಯ ಅಭಿವೃದ್ಧಿ ನಡೆಯುತ್ತಿದೆ. ಶರತ್ ಬಚ್ಚೇಗೌಡ ಸಾಹೇಬರಿಗೆ ಜಯವಾಗಲಿ. ಜೈ ಕಾಂಗ್ರೆಸ್. ನನ್ನನ್ನು ಹೇಗೆ ಆಶೀರ್ವದಿಸಿದಿರೋ ಅದೇ ರೀತಿ ರಕ್ಷಾ ರಾಮಯ್ಯ ಅವರನ್ನೂ ಆಶೀರ್ವದಿಸಿ’ ಎಂದು ಮನವಿ ಮಾಡಿದರು.

ಶಾಶ್ವತ ನೀರಾವರಿ ಯೋಜನೆ ಮಾಡಲಿದ್ದೇವೆ. ದೊಡ್ಡಬಳ್ಳಾಪುರದ ಇಂಡಸ್ಟ್ರಿಯಲ್ ಏರಿಯಾದ ವೇಸ್ಟ್​ ಮ್ಯಾನೇಜ್ಮೆಂಟ್​ಗೆ ಆದ್ಯತೆ ನೀಡಲಿದ್ದೇವೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಿದರೆ ಗ್ಯಾರಂಟಿ ಯೋಜನಗೆಳು ಸ್ಥಗಿತವಾಗಬಹುದು ಎಂದು ಮಾಗಡಿ ಶಾಸಕ ಬಾಲಕೃಷ್ಣ ಇತ್ತೀಚೆಗೆ ಹೇಳಿದ್ದು ವ್ಯಾಪಕ ವಿವಾದಕ್ಕೆ ಗುರಿಯಾಗಿತ್ತು. ನಂತರ ಸ್ಪಷ್ಟನೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ ಎಂದಿದ್ದರು.

Related