ಯಾವುದೇ ಮಹಿಳೆಯ ಆಸ್ತಿಯನ್ನು ನಾನು ಕಬಳಿಸಿಲ್ಲ: ಡಿಸಿಎಂ

ಯಾವುದೇ ಮಹಿಳೆಯ ಆಸ್ತಿಯನ್ನು ನಾನು ಕಬಳಿಸಿಲ್ಲ: ಡಿಸಿಎಂ

ಬೆಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ರಾಜ್ಯ ರಾಜಕೀಯದಲ್ಲಿ ಮಹಾನ್ ನಾಯಕರುಗಳೇ ಒಬ್ಬರ ಮೇಲೆ ಒಬ್ಬರುಗಳು ಆರೋಪ ಮಾಡುತ್ತಿದ್ದಾರೆ.

ಹೌದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗ್ಯಾರಂಟಿಗಳ ಯೋಜನೆಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಾತನಾಡಿದ ರಿಂದ ಈಗ ಎಚ್ಡಿಕೆ ಮತ್ತು ಡಿಕೆ ಶಿವಕುಮಾರ್ ವಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ ಸಿಡಿದೇಳುತ್ತಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಕೆ ಶಿವಕುಮಾರ್ ತನ್ನ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಮಾಡುತ್ತಿರುವ ವೈಯಕ್ತಿಕ ಟೀಕೆಗಳು ಮಾಡುತ್ತಿದ್ದಾರೆ, ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಅವರು ಹೇಳಿದ್ದನ್ನೆಲ್ಲ ಸಮುದಾಯಕ್ಕೋಸ್ಕರ ಸಹಿಸಿಕೊಂಡೆ, ಆದರೆ ಎಲ್ಲಕ್ಕೂ ಒಂದು ಮಿತಿ ಅಂತ ಇರುತ್ತದೆ, ತಮ್ಮ ರಾಜಕೀಯ ಗುರಿಸಾಧನೆಗಾಗಿ ಅವರು ಸಮುದಾಯದಿಂದ ದೂರವಾಗುತ್ತಿದ್ದಾರೆ, ಈ ಲೋಕಸಭಾ ಚುನಾವಣೆಯ ನಂತರ ಅವರ ಮತ್ತು ಜೆಡಿಎಸ್ ಸ್ಥಿತಿ ಏನಾಗಲಿದೆ ಅಂತ ಜನ ನೋಡಲಿದ್ದಾರೆ, ಯಾರಿಗೂ ಮುಖ ತೋರಿಸದ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಶಿವಕುಮಾರ್ ಹೇಳಿದರು.

ಬಂಡೆ ಒಡೆದೆ, ಕಲ್ಲು ಸೀಳಿದೆ ಅಂತ ಕುಮಾರಸ್ವಾಮಿ ಹೇಳ್ತಾರಲ್ಲ? ಹೌದು, ನನ್ನ ಜಮೀನಲ್ಲಿ ಬಂಡೆ ಸೀಳಿದ್ದೇನೆ, ಕಲ್ಲು ಒಡೆದಿದ್ದೇನೆ, ನನ್ನ ಮಕ್ಕಳ ಭವಿಷ್ಯಕ್ಕಾಗಿ ಅದೆಲ್ಲವನ್ನು ಮಾಡಿದ್ದೇನೆ ಎಂದು ಹೇಳಿದ ಶಿವಕುಮಾರ್, ಯಾವುದೇ ಮಹಿಳೆಯ ಆಸ್ತಿಯನ್ನು ತಾನು ಕಬಳಿಸಿಲ್ಲ ಎಂದರು.

Related