ನಾನು ಯದುವೀರ್‌ ಒಡೆಯರ್‌ ಅವರ ಬಗ್ಗೆ ಮಾತನಾಡುವುದಿಲ್ಲ: ಡಿಕೆಶಿ

ನಾನು ಯದುವೀರ್‌ ಒಡೆಯರ್‌ ಅವರ ಬಗ್ಗೆ ಮಾತನಾಡುವುದಿಲ್ಲ: ಡಿಕೆಶಿ

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಎಲ್ಲಾ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಬರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಇನ್ನು ಮೈಸೂರಿನ ಬಿಜೆಪಿ ಅಭ್ಯರ್ಥಿಯಾಗಿರುವ ಯದುವೀರ್‌ ಒಡೆಯರ್‌ ಬಗ್ಗೆ ನಾನು ಏನನ್ನು ಮಾತನಾಡಲು ಹೋಗೋದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ನಗರದಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಯದುವೀರ್ ಒಡೆಯವರ ಬಗ್ಗೆ ನಾನು ಮಾತನಾಡಿದರು ಏನು ಪ್ರಯೋಜನವಿಲ್ಲ. ಜನರ ಸೇವೆ ಮಾಡುವವರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೆನಪಿಟ್ಟುಕೊಳ್ಳುತ್ತಾರೆ ಹಾಗಾಗಿ ನಾವು ಯದುವೀರ್‌ ಒಡೆಯರ್‌  ಬಗ್ಗೆ ಮಾತನಾಡುವುದಿಲ್ಲ. ನಮಗೇನಿದ್ದರೂ ಬಿಜೆಪಿ ಟಾರ್ಗೆಟ್ ಹೊರತಾಗಿ ಯದುವೀರ್ ಒಡೆಯರ್ ಟಾರ್ಗೆಟ್ ಅಲ್ಲ ಎಂದು ಹೇಳಿದ್ದಾರೆ

ಮೈಸೂರು ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಟಿಕೆಟ್ ಸಿಕ್ಕಿ 40 ವರ್ಷವಾಗಿತ್ತು. ಆದ ಕಾರಣ ನಾನು ಮತ್ತು ಸಿದ್ದರಾಮಯ್ಯ ಇಬ್ಬರು ಚರ್ಚೆ ನಡೆಸಿ ಲಕ್ಷ್ಮಣ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದ್ದೇವೆ.

ವಿಶ್ವನಾಥ್, ಚಂದ್ರಪ್ರಭಾ ಅರಸ್, ಸಿ.ಎಚ್.ವಿಜಯಶಂಕರ್, ಶ್ರೀಕಂಠದತ್ತ ಒಡೆಯರ್ ಇವರಿಗೆ ಟಿಕೆಟ್ ನೀಡಿದ್ದೆವು. ಕೆಪಿಸಿಸಿ ಅಧ್ಯಕ್ಷರಾಗಿರುವ ಕಾರಣ ಸಮುದಾಯಕ್ಕೆ ಅವಕಾಶ ಒದಗಿಸಬೇಕು ಎಂದು ಹಲವಾರು ಮುಖಂಡರು ಮನವಿ ಮಾಡಿದ್ದರು. ಆದ ಕಾರಣ ಈ ಬಾರಿ ಎಂಟು ಮಂದಿ ಒಕ್ಕಲಿಗರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

Related