ವೋಟು ಹಾಕಿ ಬಂದವರಿಗೆ ಹೋಟೆಲ್​ಗಳು ಏನನ್ನೂ ಉಚಿತವಾಗಿ ನೀಡುವಂತಿಲ್ಲ

ವೋಟು ಹಾಕಿ ಬಂದವರಿಗೆ ಹೋಟೆಲ್​ಗಳು ಏನನ್ನೂ ಉಚಿತವಾಗಿ ನೀಡುವಂತಿಲ್ಲ

ಬೆಂಗಳೂರು: ವೋಟು ಹಾಕಿ ಬಂದವರಿಗೆ ದೋಸೆ ಫ್ರೀ, ತಿಂಡಿ ಫ್ರೀ, ಊಟ ಫ್ರೀ ಅಂತ ತಮ್ಮ ಹೋಟೆಲ್ ಗಳ ಮುಂದೆ ಬೋರ್ಡ್ ಬ್ಯಾನರ್ ಗಳನ್ನು ತೂಗು ಹಾಕಿದ್ದ ಮಾಲೀಕರಿಗೆ ಆಘಾತ ಎದುರಾಗಿದೆ. ಹೋಟೆಲ್ ನವರ್ಯಾರೂ ಉಚಿತವಾಗಿ ಏನನ್ನೂ ನೀಡುವಂತಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಚುನಾವಣಾ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಸಿದ್ದಾರೆ.

ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ಸಂಬಂಧ ದಿನಾಂಕ: 29-03-2023 ರಿಂದ ಮಾದರಿ ನೀತಿ ಸಂಹಿತಿಯು ಜಾರಿಯಲ್ಲಿದ್ದು, ದಿನಾಂಕ: 10-05-2023 ರಂದು ಮತದಾನವು ನಡೆಯಲಿದ್ದು, ದಿನಾಂಕ: 13-05-2023 ರಂದು ಮತ ಎಣಿಕೆ ಕಾರ್ಯವು ನಡೆಯಲಿರುತ್ತದೆ.

ಈಗಾಗಲೇ ಕೆಲವು ಪತ್ರಿಕೆಗಳಲ್ಲಿ ಕೆಲವೊಂದು ಹೋಟೆಲ್‌ಗಳ ಮುಂಭಾಗದಲ್ಲಿ ದಿನಾಂಕ: 10-05-2023 ರಂದು ಮತದಾನ ಮಾಡಿ ಬರುವ ಮತದಾರರು ಗುರುತು ತೋರಿಸಿದಲ್ಲಿ ಉಚಿತವಾಗಿ/ರಿಯಾಯಿತಿ ದರದಲ್ಲಿ ತಿಂಡಿ, ಪಾನಿಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಬೋರ್ಡ್‌ಗಳನ್ನು ಅಳವಡಿಸಿರುವುದು ಕಂಡುಬಂದಿದ್ದು, ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು (Considered as Inducement and violation of MCC) ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿಸಿದ ಹೋಟೆಲ್ ಮಾಲೀಕರನ್ನೇ ನೇರೆ ಹೊಣೆಗಾರರನ್ನಾಗಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

Related