ಆಸ್ಪತ್ರೆ ಸಿಬ್ಬಂದಿ ಆತ್ಮಹತ್ಯೆ

ಆಸ್ಪತ್ರೆ ಸಿಬ್ಬಂದಿ ಆತ್ಮಹತ್ಯೆ

ಹುಬ್ಬಳ್ಳಿ : ಕಿಮ್ಸ್ ಆಸ್ಪತ್ರೆಯಲ್ಲಿ ಶವಾಗಾರ ಸಿಬ್ಬಂದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಬಿಡನಾಳ ಬಳಿಯ ಸೋನಿಯಾ ಗಾಂಧಿ ನಗರದ ಲಕ್ಷ್ಮಣ ಗೂಳಪ್ಪ ದೊಡ್ಡಮನಿ (54) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕ್ಷುಲ್ಲಕ ವಿಷಯವಾಗಿ ಮಗನೊಂದಿಗೆ ಜಗಳವಾಗಿದ್ದಕ್ಕೆ ಮನನೊಂದು ಪಕ್ಕದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಎಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related