ಬಿರುಕು ಬಿಟ್ಟ ಪಾದಗಳಿಗೆ ಮನೆಮದ್ದು

ಬಿರುಕು ಬಿಟ್ಟ ಪಾದಗಳಿಗೆ ಮನೆಮದ್ದು

ನಾವು ಅಂದವಾಗಿ ಕಾಣಲು ಕೇವಲ ನಮ್ಮ ಮುಖಕ್ಕೆ ಶೃಂಗಾರ ಮಾಡಿದ್ದಾರೆ ಸಾಲದು. ನಮ್ಮ ದೇಹದಲ್ಲಿರುವ ಪ್ರತಿಯೊಂದು ಅಂಗಗಳು ಸುಂದರವಾಗಿದ್ದಾಗ ಮಾತ್ರ ನಾವು ಬಹಳ ಚೆನ್ನಾಗಿ ಕಾಣಲು ಸಾಧ್ಯ. ಆದ್ದರಿಂದ ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಚೆನ್ನಾಗಿ ಇಟ್ಟುಕೊಳ್ಳಬೇಕು.

ಹೌದು, ಪಾದಗಳು ಬಿರುಕು ಬಿದುವುದು ಎಲ್ಲರಲ್ಲಿ ಕಾಡುವ ಒಂದು ಸಮಸ್ಯೆಯಾಗಿದ್ದು ಈ ಬಿರುಕು ಸಮಸ್ಯೆಗಳಿಗೆ ಬೇವಿನ ಸೊಪ್ಪು ಮನೆಮದ್ದಾಗಿದೆ ಎಂದು ಆಯುರ್ವೇದಿಕ್ ವೈದ್ಯರು ತಿಳಿಸುತ್ತಾರೆ.

ಬೇವಿನ ಸೊಪ್ಪಿನಲ್ಲಿ ಕಹಿ ಅಂಶ ಇರುವುದರಿಂದ ನಮ್ಮ ಪಾದಗಳಿಗೆ ಬೇವಿನ ಎಲೆಗಳನ್ನು ಚೆನ್ನಾಗಿ ರುಬ್ಬಿ ರಾತ್ರಿ ಮಲಗುವ ಸಂದರ್ಭದಲ್ಲಿ ಬೇವಿನ ಲೇಪನವನ್ನು ಪಾದಗಳಿಗೆ ಹಚ್ಚುವುದರಿಂದ ಕ್ರಮೇಣವಾಗಿ ಪಾದಗಳು ಬಿರುಕು ಕಡಿಮೆಯಾಗುತ್ತದೆ.

ಕೊಂಚ ನೀರು ಸೇರಿಸಿ ಮದರಂಗಿ ಹಚ್ಚುವಷ್ಟು ದಟ್ಟನೆಯ ಲೇಪನ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧಗಂಟೆಯವರೆಗೆ ಒಣಗಲು ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ.

ಬೇವು ಮತ್ತು ಅರಿಶಿನ ಎರಡೂ ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಶಕ್ತಿ ಪಡೆದಿರುವುದರಿಂದ ಶೀಘ್ರವೇ ಬಿರುಕುಬಿಟ್ಟ ಚರ್ಮ ಆರೋಗ್ಯಕರವಾಗಿ ಕಂಗೊಳಿಸುತ್ತದೆ.

ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಮಾತ್ರ ಉಪಯೋಗಿಸಿದರೆ ಸಾಕು.

 

Related