ಮಧ್ಯಮ ಪ್ರಿಯರಿಗೆ ಮಾತ್ರ ಲಿವರ್ ಸಮಸ್ಯೆ ಉಂಟಾಗುವುದಿಲ್ಲ.

  • In State
  • May 7, 2022
  • 211 Views

ಕೇವಲ ಮದ್ಯಪಾನ ಮಾಡುವವರಿಗೆ ಮಾತ್ರ ಲಿವರ್‌ ಸಮಸ್ಯೆ ಉಂಟಾಗಬಲ್ಲದು ಎನ್ನುವುದು ಕುರುಡು ನಂಬಿಕೆ. ಎಲ್ಲರಿಗೂ ಲಿವರ್‌ ಸಮಸ್ಯೆ ಉಂಟಾಗಬಹುದು. ಫ್ಯಾಟಿ ಲಿವರ್‌ ಕೂಡ ಎಲ್ಲರಿಗೂ ಸಾಮಾನ್ಯವಾಗಿ ಉಂಟಾಗುವಂತಹ ತೊಂದರೆಯಾಗಿದ್ದು, ಕೆಲವು ಲಕ್ಷಣಗಳ ಬಗ್ಗೆ ಎಚ್ಚೆತ್ತುಕೊಂಡರೆ ಆರಂಭದಲ್ಲೇ ನಿಯಂತ್ರಿಸಬಹುದು.

ಆರಂಭದಲ್ಲಿ ಏನೊಂದೂ ಸುಳಿವು ನೀಡದೆ ಅಂತಿಮ ಹಂತದಲ್ಲಿರುವಾಗ ಏಕಾಏಕಿ ಪ್ರಾಣಾಂತಿಕವಾಗುವ ಹಲವಾರು ರೋಗಗಳಿವೆ. ಅವುಗಳಲ್ಲಿ ಫ್ಯಾಟಿ ಲಿವರ್‌ (Fatty Liver) ಕೂಡ ಒಂದು. ಫ್ಯಾಟಿ ಲಿವರ್‌ ಅಂದರೆ ಯಕೃತ್ತು ದಪ್ಪಗಾಗುವ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗಿದೆ. ಫ್ಯಾಟಿ ಲಿವರ್‌ ರೋಗ ಆರಂಭದಲ್ಲಿ ತಿಳಿದುಬರುವುದು ಕಡಿಮೆ.

ಆದರೂ ಕೆಲವೊಂದು ಲಕ್ಷಣಗಳು ಗೋಚರಿಸುತ್ತವೆ. ಅವುಗಳ ಕುರಿತು ಎಚ್ಚರಿಕೆ ವಹಿಸಿ ಪರೀಕ್ಷೆ ಮಾಡಿಸಿಕೊಂಡರೆ ಮಾತ್ರ ಆರಂಭದಲ್ಲಿ ಪತ್ತೆ ಮಾಡಬಹುದು. ನಮ್ಮ ಯಕೃತ್ತಿನ ಕೋಶಗಳಲ್ಲಿ ಕೊಬ್ಬು ಜಮಾವಣೆಯಾಗುತ್ತ ಹೋಗುವುದು ಈ ರೋಗಕ್ಕೆ ಮೂಲ ಕಾರಣ.. ಈ ಸಮಸ್ಯೆಯಿಂದ ನಮ್ಮ ಲಿವರ್‌ ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾಗುತ್ತದೆ. ಮದ್ಯಪಾನಿಗಳಿಗೆ ಈ ಸಮಸ್ಯೆ ಹೆಚ್ಚು. ಆದರೆ, ಮದ್ಯಪಾನಿಗಳಲ್ಲದವರಿಗೂ ಇದು ಕಾಡುತ್ತದೆ. ಅಧಿಕ ಕೊಬ್ಬು, ಮಧುಮೇಹ, ನಿದ್ರಾಹೀನತೆ , ಥೈರಾಯ್ಡ್‌ ಸಮಸ್ಯೆ ಇತ್ಯಾದಿಗಳಿಂದ ಈ ರೋಗ ಉಂಟಾಗಬಹುದು. ಹೀಗಾಗಿ, ಇದರ ಕೆಲವು ಲಕ್ಷಣಗಳನ್ನು ಅರಿತುಕೊಳ್ಳುವುದು ಅತಿ ಅಗತ್ಯ.

Related