ಸಚಿವ ಶಿವಾನಂದ ಪಾಟೀಲ್‌ಗೆ ಎಚ್‌ಡಿಕೆ ತಿರುಗೇಟು

ಸಚಿವ ಶಿವಾನಂದ ಪಾಟೀಲ್‌ಗೆ ಎಚ್‌ಡಿಕೆ ತಿರುಗೇಟು

ಬೆಂಗಳೂರು:  ರಾಜ್ಯದಲ್ಲಿ ಬರಗಾಲ ಬರಲಿ ಎಂದು ರೈತರು ಕಾಯುತ್ತಿರುತ್ತಾರೆ. ಕಾರಣ ಬರಗಾಲ ಬಂದರೆ ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎಂಬ ಆಸೆ ರೈತರಿಗೆ ಇರುತ್ತದೆ ಅಂತ ಸಚಿವ ಶಿವಾನಂದ ಪಾಟೀಲ್ ಲಘು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿ ರಾಜ್ಯದಲ್ಲಿಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನು ಸಚಿವರ ಹೇಳಿಕೆಯನ್ನು ಖಂಡಿಸಿ ರಾಜ್ಯದಲ್ಲಿ ರೈತ ಮುಖಂಡರು ಸೇರಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುಡುಗಿದ್ದಾರೆ.

ರೈತರು ಕೇಳುತ್ತಿರುವುದು ತಮ್ಮ ಹಕ್ಕುಗಳನ್ನೇ ಹೊರತು, ಭಿಕ್ಷೆಯನ್ನಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾ.

ಸಚಿವ ಶಿವಾನಂದ ಪಾಟೀಲ್ ಹೇಳಿದ್ದೇನು?

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ರೈತರ ಬಗ್ಗೆ ಉಡಾಫೆ ಹೇಳಿಕೆ ನೀಡಿದ್ದರು. ರೈತರು ಬರಗಾಲ ಬರಲಿ ಎಂದು ಕಾಯತ್ತಾರೆ ಅಂತ ಸಚಿವರು ಹೇಳಿದ್ದರು.

ಬರಗಾಲ ಬರಲಿ ಎಂದು ರೈತರು ಕಾಯತ್ತಾರೆ!

ಹೀಗಂತ ಸಚಿವರು ಉಡಾಫೆ ಹೇಳಿಕೆ ನೀಡಿದ್ದರು. ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ವಿದ್ಯುತ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟು ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜವನ್ನೂ ಕೊಟ್ಟರು, ಗೊಬ್ಬರವನ್ನೂ ಕೊಟ್ಟರು. ಇನ್ನೂ ರೈತರಿಗೆ ಒಂದೆ ಆಸೆ ಇದೆ. ಅದು ಏನಪ್ಪಾ ಎಂದರ ಆಗಾಗ ಬರಲಾಗ ಬರಲಿ ಎಂದು ರೈತರು ಬಯಸುತ್ತಾರೆ. ಕಾರಣ ಸರ್ಕಾರ ತಮ್ಮ ಸಾಲ ಮನ್ನಾ ಮಾಡುತ್ತೆ ಅಂತ. ಆದರೆ ಈ ರೀತಿಯಾಗಿ ಬಯಸಬಾರದು ಅಂತ ಶಿವಾನಂದ ಪಾಟೀಲ್ ಹೇಳಿದ್ದರು.

ಇನ್ನು ಸಚಿವರ ಹೇಳಿಕೆಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಶಿವಾನಂದ ಪಾಟೀಲ ಅವರು ರೈತರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಅನ್ನದಾತನ ಕಷ್ಟ, ಸಂಕಷ್ಟಗಳ ಬಗ್ಗೆ ಅವಹೇಳನ ಮಾಡುವುದು ಖಂಡಿತಾ ಸರಿಯಲ್ಲ ಅಂತ ಎಚ್‌ಡಿಕೆ ಟ್ವೀಟ್ ಮಾಡಿದ್ದಾರೆ.

 

Related