ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತಿರುವ ಎಚ್.ಡಿ.ತಮ್ಮಯ್ಯ

ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತಿರುವ ಎಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು: ಚಿಕ್ಕಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಟಿ ರವಿ ಅವರ ವಿರುದ್ಧ 5000 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ ಎಚ್ ಡಿ ತಮ್ಮಯ್ಯ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎಚ್ ಡಿ ತಮ್ಮಯ್ಯ ಅವರು ಸದ್ಯ ಬೈಕಿನಲ್ಲಿ ಹಳ್ಳಿ-ಹಳ್ಳಿ ಸುತ್ತುತ್ತಿದ್ದಾರೆ. ಯುವಕರ ಜೊತೆಗೆ ಹಳ್ಳಿ ರೌಂಡ್ಸ್ ಹಾಕುತ್ತಿರುವ ಶಾಸಕ ತಮ್ಮಯ್ಯ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಹಳ್ಳಿಗಳನ್ನ ಸುತ್ತುತ್ತಿರುವ ಶಾಸಕ ತಮ್ಮಯ್ಯ ಅವರಿಗೆ ಯುವಕರು ಸಾಥ್ ನೀಡುತ್ತಿದ್ದಾರೆ.

ಚುನಾವಣೆಗೆ ಎರಡು ತಿಂಗಳ ಹಿಂದೆ ಕಾಂಗ್ರೆಸ್ ಸೇರಿದ್ದ ತಮ್ಮಯ್ಯ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದಾರೆ. ಶಾಸಕರಾಗಿದ್ದ ಸಿ.ಟಿ ರವಿ ಅವರನ್ನು ತಮ್ಮಯ್ಯ ಐದು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.

Related