50 ಸಾವಿರ ಲಂಚಕ್ಕೆ ಡಿಮಾಂಡ್ ಮಾಡಿದ ಸರ್ಕಾರಿ ಆಸ್ಪತ್ರೆ: ಮಗನ ಶವ ಪಡೆಯಲು ಬೀದಿಗಿಳಿದು ಬಿಕ್ಷೆ ಬೇಡುತ್ತಿದ್ದ ಪೋಷಕರು..!

  • In Crime
  • June 9, 2022
  • 292 Views
50 ಸಾವಿರ ಲಂಚಕ್ಕೆ ಡಿಮಾಂಡ್ ಮಾಡಿದ ಸರ್ಕಾರಿ ಆಸ್ಪತ್ರೆ: ಮಗನ ಶವ ಪಡೆಯಲು ಬೀದಿಗಿಳಿದು ಬಿಕ್ಷೆ ಬೇಡುತ್ತಿದ್ದ ಪೋಷಕರು..!

ಪಾಟ್ನಾ, ಜೂ 09 : ಸರ್ಕಾರಿ ಆಸ್ಪತ್ರೆಯಲ್ಲಿದ್ದ ತಮ್ಮ ಮಗನ ಶವವನ್ನು ಮರಳಿ ಪಡೆಯಲು 50 ಸಾವಿರ ರೂ. ಲಂಚ ಕೇಳಿದ್ದರಿಂದ ವೃದ್ಧ ದಂಪತಿ ಬೀದಿ, ಬೀದಿಗಳಲ್ಲಿ ಹಣಕ್ಕಾಗಿ ಭಿಕ್ಷೆ ಬೇಡಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.
ಮಗನ ಶವ ಪಡೆಯಲು ದಂಪತಿ ಬಳಿ ಹಣವಿಲ್ಲದ ಕಾರಣ, ಹಣಕ್ಕಾಗಿ ಊರೂರು ಭಿಕ್ಷೆ ಬೇಡುತ್ತಾ ಅಲೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯ ಈ ಕುರಿತಂತೆ ಮಾತನಾಡಿದ ಮೃತನ ತಂದೆಮಹೇಶ್ ಠಾಕೂರ್ ಅವರು, ಕೆಲವು ದಿನಗಳ ಹಿಂದೆ ನನ್ನ ಮಗ ನಾಪತ್ತೆಯಾಗಿದ್ದನು. ಈಗ ನನ್ನ ಮಗನ ಶವ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂದಿತ್ತು. ಹೀಗಾಗಿ ನನ್ನ ಮಗನ ಶವವನ್ನು ನೀಡುವುದಕ್ಕೆ ಆಸ್ಪತ್ರೆಯ ಸಿಬ್ಬಂದಿ 50 ಸಾವಿರ ರೂ. ಕೇಳಿದ್ದಾರೆ. ನಾವು ಬಡವರು, ಅಷ್ಟು ಮೊತ್ತವನ್ನು ನಾವು ಹೇಗೆ ಪಾವತಿಸಲು ಸಾಧ್ಯ ಎಂದು ಅಳಲು ತೊಡಿಕೊಂಡಿದ್ದಾರೆ.

Related