ರೆಸಾರ್ಟ್ ನಲ್ಲಿ ಭರ್ಜರಿ ಡ್ರಗ್ಸ್ ಪಾರ್ಟಿ

ರೆಸಾರ್ಟ್ ನಲ್ಲಿ ಭರ್ಜರಿ ಡ್ರಗ್ಸ್ ಪಾರ್ಟಿ

ಬೆಂಗಳೂರು : ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ನೋಟಿಸ್ ಪಡೆದಿರುವ ನಟ ಅಕುಲ್ ಬಾಲಾಜಿ ಒಡೆತನದ ಸನ್ ಶೈನ್  ರೆಸಾರ್ಟ್ ನಲ್ಲಿ  ಡ್ರಗ್ಸ್ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿತ್ತು.

ಸ್ಟಾರ್ ನಟ-ನಟಿಯರು, ನಟರ ಪತ್ನಿಯರು ಈ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದೆ. ಇದೇ ಕಾರಣಕ್ಕಾಗಿ ಅಕುಲ್ ಬಾಲಾಜಿಯನ್ನು ವಿಚಾರಣೆಗೆ ಕರೆದಿದ್ದಾರೆ .

ದೊಡ್ಡಬಳ್ಳಾಪುರ ಬಳಿಯ ತಮ್ಮ ಸನ್ ಶೈನ್ ರೆಸಾರ್ಟ್ ನಲ್ಲಿ ಈ ಪಾರ್ಟಿಯಲ್ಲಿ ಅಗತ್ಯ ಇದ್ದವರಿಗೆ ರಾಹುಲ್ ಹಾಗೂ ವಿರೇನ್ ಖನ್ನಾರಿಂದ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿತ್ತು.

ಲಾಕ್‌ಡೌನ್ ಸಂದರ್ಭದಲ್ಲಿ ಏ.20ರಂದು ಸನ್ ಶೈನ್ ರೆಸಾರ್ಟ್ ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಈ ಬಗ್ಗೆ ಸ್ಥಳೀಯರೊಬ್ಬರು ದೊಡ್ಡಬಳ್ಳಾಪುರ ಠಾಣೆಗೆ ದೂರು ನೀಡಿದರು.

Related