ನಿರಂತರ ಓದಿನಿಂದ ಉತ್ತಮ ಫಲಿತಾಂಶ

ನಿರಂತರ ಓದಿನಿಂದ ಉತ್ತಮ ಫಲಿತಾಂಶ

ಕಮಲನಗರ : ನಿರತಂರ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಂಡರೆ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆಯಲು ಸಾಧ್ಯ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ನಿರ್ದೇಶಕ ಜೆ.ಎಂ. ವಿಜಯಕುಮಾರ ಸಲಹೆ ನೀಡಿದರು.
ತಾಲ್ಲೂಕಿನ ಕೌಡಗಾಂವ ಗ್ರಾಮದ ಸರ್ಕಾರಿ ಪ್ರೌಡಶಾಲೆಗೆ ಶನಿವಾರ ಭೇಟಿ ನೀಡಿ, 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಮಾತನಾಡಿ, ಪಾಲಕರು, ಶಿಕ್ಷಕರು ಒತ್ತಾಯ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಓದಬಾರದು. ಓದುವುದಕ್ಕೆ ಪ್ರೇರೆಪಿಸುವುದನ್ನು ವಿದ್ಯಾರ್ಥಿಗಳು ಹಿಂಸೆ ಎಂದು ತಿಳಿಯದೆ, ನಿರಂತರ ಓದುವ ಅಭ್ಯಾಸ ಬೆಳೆಸಿಕೊಂಡರೆ 100ಕ್ಕೆ 100 ಅಂಕ ಪಡೆಯ ಬಹುದು. ವಿದ್ಯಾರ್ಥಿಗಳು ಪ್ರತಿದಿನ ಧ್ಯಾನ ಮಾಡುವುದನ್ನು ಬೆಳೆಸಿಕೊಳ್ಳ್ಳಬೇಕು. ಧ್ಯಾನ ಮಾಡುವುದರಿಂದ ಓದಿದ್ದನ್ನು ನೆನಪಿಸಿಕೊಳ್ಳಬಹುದೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿ ಏಕಾಂತದಲ್ಲಿ ಓದಿದರೆ ಎಲ್ಲ ವಿಷಯ ಸಂಗ್ರಹಣೆ ಮಾಡಲು ಸಾಧ್ಯ. ಬಿಡುವಿನ ಸಮಯದಲ್ಲಿ ಹೆಚ್ಚಾಗಿ ಬರೆಯಬೇಕು. ವಿಜ್ಞಾನ, ಗಣಿತ, ಆಂಗ್ಲ ವಿಷಯಗಳು ಕಠಿಣ ಅಲ್ಲ ಎಂದು ಅವುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಆತ್ಮಸ್ದೈರ್ಯ ತುಂಬುವ ಕೆಲಸ ಶಿಕ್ಷಕರು ಮಾಡಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಕೊಂಡು ಅಪಾರ ಜ್ಞಾನ ಸಂಪಾದನೆ ಮಾಡಿ ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಈ ಸಂದರ್ಭ ಔರಾದ್ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಸ್. ನಗನೂರ, ಶಿಕ್ಷಣ ಸಂಯೋಜಕ ಬಲಭೀಮ ಕುಲಕರ್ಣಿ, ಇಸಿಒ ಈಶ್ವರ ಕ್ಯಾದೆ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಬಾಲಿಕಾ ಬೇಂದ್ರೆ, ಜೀಜನಾ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವಿಜಯಕುಮಾರ, ಶಿಕ್ಷಕಿ ಸವಿತಾ ಇದ್ದರು.

Related