ಚಿನ್ನದ ಬೆಲೆಯಲ್ಲಿ ಕುಸಿತ!

ಚಿನ್ನದ ಬೆಲೆಯಲ್ಲಿ ಕುಸಿತ!

ಹೊಸದಿಲ್ಲಿ: ಮಾರ್ಚ್ ಆರಂಭದಿoದಲೂ ಬಂಗಾರದ ಬೆಲೆಯಲ್ಲಿ ಗಣನೀಯ ಕುಸಿತ ಕಂಡಿದೆ. ಕಳೆದ ವಾರಪೂರ್ತಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ, ಈ ವಾರವೂ ಇಳಿಕೆಯ ಹಾದಿಯಲ್ಲೇ ಮುಂದುವರಿದಿದೆ. ಸೋಮವಾರ ಕೂಡ ಚಿನ್ನದ ಬೆಲೆ ಇಳಿಕೆಯಾಗಿದ್ದು, ಸಾವರ್ಕಾಲಿಕ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಬರೋಬ್ಬರಿ 11,500 ರೂಪಾಯಿ ಇಳಿಕೆಯಾಗಿದೆ.

ಇದು ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದ್ದರೆ, ಚಿನ್ನಬೆಳ್ಳಿ ಮಾರುಕಟ್ಟೆಯಲ್ಲಿ ಒತ್ತಡಕ್ಕೆ ಕಾರಣವಾಗಿದೆ. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ಆಫ್ ಇಂಡಿಯಾದಲ್ಲಿ ಸೋಮವಾರ ಕೂಡ ಶುದ್ಧ ಚಿನ್ನದ ಬೆಲೆಯಲ್ಲಿ ಶೇ.0.07ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ₹44,653 ಕ್ಕೆ ಇಳಿದಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಶೇ.1.3ರಷ್ಟು ಏರಿಕೆಯಾಗಿದ್ದು, 1 ಕೆಜಿ ಬೆಳ್ಳಿಯ ಬೆಲೆ ₹66,465 ಕ್ಕೆ ನಿಗದಿಯಾಗಿದೆ. 2021 ರ ಆರಂಭದಲ್ಲಿದ್ದ ಬೆಲೆಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ 5000 ರೂಪಾಯಿ ಇಳಿಕೆಯಾಗಿದೆ. ಕಳೆದ ಜನವರಿಯಯಲ್ಲಿ ಚಿನ್ನದ ಬೆಲೆ 48,500 ರೂಪಾಯಿ ಇತ್ತು. ಸಾರ್ವಕಾಲಿಕ ಗರಿಷ್ಠ ಬೆಲೆಗೆ ಹೋಲಿಸಿದರೆ ಇದೀಗ ಶೇ. 20 ರಷ್ಟು ಬೆಲೆ ಇಳಿಕೆಯಾಗಿದೆ.

Related