ಹುಡುಗಿಯ ಮನೆಗೆ ಹೋಗಿ ತಾಳಿಕಟ್ಟಿ ಪ್ರೇಮಿ!

ಹುಡುಗಿಯ ಮನೆಗೆ ಹೋಗಿ ತಾಳಿಕಟ್ಟಿ ಪ್ರೇಮಿ!

ಹಾಸನ :  ಜಿಲ್ಲೆಯ  ಸಕಲೇಶಪುರ  ಪಟ್ಟಣದ  ಕುಶಾಲ ನಗರ  ಬಡಾವಣೆಯಲ್ಲಿ  ವಿವಾಹ  ನಿಗದಿಯಾಗಿದ್ದ ಮಧುಮಗಳಿಗೆ ಮಾಜಿ ಪ್ರಿಯಕರನಿಂದ ಬಲವಂತವಾಗಿ ಮದುವೆಯಾಗಿರುವ ಘಟನೆ ನಡೆದಿದೆ.

ಇದೇ ಸೋಮವಾರ ಯುವತಿಗೆ ಮದುವೆಯಾಗಬೇಕಾಗಿತ್ತು, ಆದರೆ ಈ ಹಿಂದೆ ತನ್ನ ಪ್ರೀತಿಸುತ್ತಿದ್ದ ಹುಡುಗ ಅರೆಕೆರೆ ಗ್ರಾಮದ ಯುವಕ ಸತೀಶ್ ಆತನ ಸ್ನೇಹಿತರು, ಸತೀಶ್‌ನನ್ನು ಯುವತಿ ಮನೆಗೆ ಕರೆದೊಯ್ದು ಅಲ್ಲೇ ಯುವತಿಯೊಂದಿಗೆ ಮದುವೆ ಮಾಡಿದ್ದಾರೆ ಅಂತ ತಿಳಿದು ಬಂದಿದೆ.

ಇನ್ನೂ ಘಟನೆ ಬಗ್ಗೆ ಯುವತಿಯ ತಾಯಿ ನನ್ನ ಮಗಳನ್ನು ಬಲವಂತವಾಗಿ ಮದುವೆಯಾಗಿದ್ದು, ನ್ಯಾಯಾ ಒದಗಿಸುವಂತೆ ಪೋಲಿಸರ ಬಳಿ ಮನವಿ ಮಾಡಿಕೊಂಡಿದ್ದು, ದಾಖಲಿಸಿಕೊಂಡ ಸಕಲೇಶಪುರ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related