ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತ

ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತ

ಔರಾದ್ : ಪಟ್ಟಣದ ಶಾಲಾ ಕಾಲೇಜು ಪ್ರಾರಂಭೋತ್ಸವ ನಿಮಿತ್ಯ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ ಚವ್ಹಾಣ ಸರ್ಕಾರಿ ಪ್ರೌಢಶಾಲೆ ಔರಾದ್ ಹಾಗೂ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಹೆಚ್ಚು ಕಡಿಮೆ ಸ್ಥಗಿತಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳು 9ರಿಂದ 12ನೇ ತರಗತಿ ಶುರುವಾಗವಾಗಿವೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತವಾಗಬಾರದು ಕರ್ನಾಟಕ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಕೋವಿಡ್ ಮೊದಲ ಅಲೆ ಪ್ರಾರಂಭಗೊಂಡಾಗ ಶಾಲಾ ಕಾಲೇಜು ಮುಚ್ಚಲಾಗಿತ್ತು. ಶಾಲೆಗಳು ಬಂದ್ ಆಗಿದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ತಲೆನೋವಾಗಿ ಪರಿಣಮಿಸಿತ್ತು. ಸೋಮವಾರದಿಂದ ಶಾಲೆಗಳು ಆರಂಭವಾಗುತ್ತಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಶಾಲಾ ಕಾಲೇಜುಗಳು ನಡೆಯುತ್ತಿದೆ.

ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ, ಕೊಠಡಿ, ಪ್ರಯೋಗಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರುಗಳಿಗೆ ಲಸಿಕೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್ ನಗನೂರ್, ಸಮನ್ವಯಾಧಿಕಾರಿ ನಾರಾಯಣ ರಾಠೋಡ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಾಲಾಜಿ ಅಮರವಾಡಿ, ಸಿ.ಆರ್.ಪಿ ಉಮಾಕಾಂತ ಮಾಹಾಜನ, ಐ.ಇ.ಆರ್.ಟಿ ಶಾಲಿವಾನ ಉದಗಿರೆ, ಇಸಿಒ ಬಾಬುರಾವ ಬಿರಾದರ, ಬಲಭೀಮ ಕುಲಕರ್ಣಿ, ಸಂಜಯ ಮೇತ್ರೆ, ಆದರ್ಶ ವಿದ್ಯಾಲಯ ಮುಖ್ಯೋಪಾಧ್ಯಾಯ ಧೂಳಪ್ಪಾ ಮಾಳೇನೂರ್, ಎಸ್.ಡಿ.ಎಮ್.ಸಿ ಅಧ್ಯಕ್ಷ ಪ್ರಕಾಶ ಅಲ್ಮಾಜೆ ಸೇರಿದಂತೆ ಇನ್ನಿತರರಿದ್ದರು.

Related