ಬಾಳೆಹಣ್ಣಿನ ಪ್ರಯೋಜನವನ್ನು ಪಡೆಯಿರಿ..!

ಬಾಳೆಹಣ್ಣಿನ ಪ್ರಯೋಜನವನ್ನು ಪಡೆಯಿರಿ..!

ದಿನನಿತ್ಯ ಜೀವನದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಹಲವಾರು ಪ್ರಯತ್ನವನ್ನು ಮಾಡುತ್ತೇವೆ. ನಮ್ಮ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದಾಗಿದೆ.

ವರ್ಷದ ಯಾವುದೇ ಸೀಸನ್ನಲ್ಲಿ ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಎಲ್ಲ ಹಣ್ಣುಗಳಿಗೆ ಹೋಲಿಕೆ ಮಾಡಿದ್ರೂ ಮಾರ್ಕೆಟ್ನಲ್ಲಿ ಇದರ ದರ ಸ್ವಲ್ಪ ಕಡಿಮೆಯೇ ಇರುತ್ತದೆ. ಹೀಗಾಗಿ ಪಟ್ಟಣಕ್ಕೆ ಹೋಗಿ ವಾಪಸ್ ಬರುವಾಗ ಒಂದು ಡಜನ್ ಬಾಳೆಹಣ್ಣು ತರುವುದು ಈಗಲೂ ಹಳ್ಳಿಗಳಲ್ಲಿ ವಾಡಿಕೆ ಇದೆ. ಬಾಳೆಹಣ್ಣು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು.

ಬಾಳೆಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ 3 ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಪೈಬರ್ಗಳಿವೆ. ಹೀಗಾಗಿ ಊಟ ಮಾಡಿದ ತಕ್ಷಣ ಕೆಲವರು ಬಾಳೆಹಣ್ಣು ತಿನ್ನುತ್ತಾರೆ. ಇದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ದಿನಕ್ಕೆ 2 ಬಾಳೆಹಣ್ಣು ತಿಂದರೆ ಒಂದೂವರೆ ಗಂಟೆ ಯಾವುದೇ ಕೆಲಸವನ್ನು ನಿರಾಳವಾಗಿ ಮಾಡಬಹುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ನಿಮ್ಮ ದೈನಂದಿನ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿದರೆ, ನೀವು ಉತ್ತಮ ಆರೋಗ್ಯ ಫಲಿತಾಂಶಗಳನ್ನು ಕಾಣಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್-ಎ, ಬಿ, ಸಿ ಮತ್ತು ವಿಟಮಿನ್ ಬಿ6 ಇದೆ. ನೀವು ಅಧಿಕ ತೂಕ ಹೊಂದಿದ್ದರೆ, ಬಾಳೆಹಣ್ಣುಗಳು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ

Related