ಗದಗದಲ್ಲಿ 5ನೇ ಕೊರೋನಾ ಸೋಂಕು ದೃಢ

ಗದಗದಲ್ಲಿ 5ನೇ ಕೊರೋನಾ ಸೋಂಕು ದೃಢ

ಗದಗ : ಜಿಲ್ಲೆಯಲ್ಲಿ ಐದನೇ ಕೊರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಸೋಂಕಿತ ವ್ಯಕ್ತಿ ಇಲ್ಲಿಯ ಗಂಜೀ ಬಸವೇಶ್ವರ ಸರ್ಕಲ್ ಬಳಿಯ ನಿವಾಸಿ. ಎಂಟು ದಿನಗಳ ಅಂತರದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ದೃಢಪಟ್ಟಿರುವದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಈಗ ಪತ್ತೆಯಾಗಿರುವ ಐದನೇ ಕೇಸ್ 75ರ ವೃದ್ದ (ಪಿ-514) ಈ ಮೊದಲಿನ ಕೇಸ್ ಸೋಂಕಿತರ ಜೊತೆಗೆ ಯಾವ ಸಂಪರ್ಕವು ಇರಲಿಲ್ಲ. ಒಂದು ವಾರಗಳ ಕಾಲ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ 9 ಜನ ಹಾಗೂ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಜನರ ಸೋಂಕಿನ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 13 ಜನರ ವರದಿ ನಕಾರಾತ್ಮಕವಾಗಿವೆ. ಉಳಿದವರ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು.

Related