ಗದಗ: ಭಿಕ್ಷಾ ಅಭಿಯಾನಕ್ಕೆ ಕುರ್ತಕೋಟಿ ಇಸರಿ ಕುಟುಂಬದಿಂದ 30 ಕ್ವಿಂಟಲ್ ಜೋಳ

ಗದಗ: ಭಿಕ್ಷಾ ಅಭಿಯಾನಕ್ಕೆ ಕುರ್ತಕೋಟಿ ಇಸರಿ ಕುಟುಂಬದಿಂದ 30 ಕ್ವಿಂಟಲ್ ಜೋಳ

ಗದಗ: ಮನುಕುಲದ ಕಲ್ಯಾಣಕ್ಕಾಗಿ ಬಿಜೆಪಿ ಮುಖಂಡ ಅನೀಲ ಮೆಣಸಿನಕಾಯಿ ಅವರು ಆರಂಭಿಸಿರುವ ಭಿಕ್ಷಾ ಅಭಿಯಾನದ ಜೋಳಿಗೆಗೆ ತಾಲೂಕಿನ ಕುರ್ತಕೋಟಿ ಗ್ರಾಮದ ಒಂದೇ ಕುಟುಂಬದವರು 30 ಕ್ವಿಂಟಲ್‍ಗೂ ಅಧಿಕ ಜೋಳ ಮತ್ತಿತರ ಧವಸಧಾನ್ಯಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ದೇಶದಲ್ಲಿ ಕೊರೋನಾ ಸಂಕಷ್ಟ ಬಂದಾಗಿನಿಂದ ಬಿಜೆಪಿ ಮುಖಂಡರಾದ ಅನೀಲ ಮೆಣಸಿನಕಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕರೆಯ ಮೇರೆಗೆ ಪ್ರಧಾನಿ ಪರಿಹಾರ ನಿಧಿಗೆ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಲಕ್ಷಾಂತರ ಹಣ ನೀಡಿದ್ದಲ್ಲದೇ ಗೋವಾದಲ್ಲಿ ನೆಲೆಸಿರುವ ರಾಜ್ಯದ ಕೂಲಿಕಾರ್ಮಿಕರಿಗೆ ಒಂದು ಟ್ರಕ್ ಧವಸದಾನ್ಯಗಳನ್ನು ವಯಕ್ತಿಕವಾಗಿ ಕಳಿಸಿದ್ದಾರೆ.

ವರಿಷ್ಟರ ಮನವಿಯಂತೆ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ನೆರವು ಕಲ್ಪಿಸಿ ಎಂಬ ಮಾತನ್ನು ಪಾಲಿಸಲು ಅನೀಲ ಮೆಣಸಿನಕಾಯಿ ಅವರು ಸಂಕಲ್ಪ ತೊಟ್ಟು ತಮ್ಮ ಹೆಸರಿಗಿಂತ ತಮ್ಮನ್ನು ನಂಬಿದ ಬಡ ಜನರ ಉಸಿರು ಮುಖ್ಯವೆಂದು ಮನುಕುಲದ ಕಲ್ಯಾಣಕ್ಕಾಗಿ ಭಿಕ್ಷೆಯ ದೀಕ್ಷೆ ತೊಟ್ಟು ರೈತರಿಂದ, ಹಿತೈಷಿಗಳಿಂದ ದವಸಧಾನ್ಯಗಳನ್ನು ಸಂಗ್ರಹಿಸಿ ರೈತರ ಹೆಸರಿನಲ್ಲಿಯೇ ಬಡವರಿಗೆ ವಿತರಿಸುತ್ತಿದ್ದಾರೆ.

ಬಡಜನರ ಸಂಕಷ್ಟ ನಿವಾರಣೆಯ ಸಂಕಲ್ಪ ತೊಟ್ಟು ಕುರ್ತಕೋಟಿ ಗ್ರಾಮದ ಇಸರಿ ಕುಟುಂಬದವರ ಬಾಗಿಲ ಬಳಿಗೆ ಮನುಕುಲದ ಜೋಳಿಗೆ ನಿಂತಾಗ ಆ ಕುಟುಂಬ ಪರಿವಾರದ ಪರಪ್ಪ ಇಸರಿ ದಂಪತಿಗಳು ಹಾಗೂ ಪರಿವಾರದವರು ಆರತಿ ಬೆಳಗಿ ಸ್ವಾಗತಿಸಿ ಬಡವರ ಬಾಳಿಗೆ ಸಂಜೀವಿನಿಯಾಗಿ ಕಾರ್ಯ ಮಾಡುತ್ತಿರುವ ಹಾಗೂ ಅನೀಲ ಮೆಣಸಿನಕಾಯಿ ಅವರ ಜನಪರ ಕಾರ್ಯಗಳನ್ನು ಮೆಚ್ಚಿ 30 ಕ್ವಿಂಟಲ್ ಜೋಳ, ಕಡಲೆ ಮುಂತಾದ ಆಹಾರ ಪದಾರ್ಥಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಕಾಂತಿಲಾಲ ಬನಸಾಲಿ, ಗದಗ ಶಹರ ಮಾಜಿ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಮುಖಂಡರಾದ ನಿಂಗಪ್ಪ ಹಿಟಬುತ್ತಿ, ರವಿ ಶಿದ್ಲಿಂಗ್, ಮಹೇಶ ದಾಸರ, ಸುನೀಲ ಕುಲಕರ್ಣಿ, ಡಾ.ಸಂತೋಷ ನಾಯಕ, ಪರಮೇಶ ನಾಯಕ, ಶರಣು ಚಿಂಚಲಿ, ದತ್ತು ಹಂಚಾಟೆ, ಶಿವಾಜಿ ಹಬೀಬ, ರಾಮಣ್ಣ ಹಂಚಾಟೆ, ಬಸವರಾಜ ಬಂಕಾಪೂರ, ಇಸರಿ ಕುಟುಂಬದ ಶಾಂತಮ್ಮ, ರತ್ನವ್ವ, ಸುಭಾಸಪ್ಪ, ಕುಮಾರ, ಷಣ್ಮುಖಪ್ಪ, ಮಲ್ಲಪ್ಪ, ಕಪ್ಪತಪ್ಪ, ಈರಣ್ಣ, ವಡಕಪ್ಪ, ಗಂಗಾಧರ, ರಾಜು, ಗಣೇಶ, ಪ್ರಕಾಶ, ಬಸವರಾಜ ಉಪಸ್ಥಿತರಿದ್ದರು.

Related