ಗದಗ 4 ಕೊಲೆ ಪ್ರಕರಣ; ಮಗನೇ ತಂದೆಗಿಟ್ಟಿದ್ದ ಮುಹೂರ್ತ

ಗದಗ 4 ಕೊಲೆ ಪ್ರಕರಣ; ಮಗನೇ ತಂದೆಗಿಟ್ಟಿದ್ದ ಮುಹೂರ್ತ

ಗದಗ: ಗದಗ ನಗರದಲ್ಲಿ ಒಂದೇ ಮನೆಯಲ್ಲಿ ನಾಲ್ಕು ಜನರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ನಗರ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ 24 ಗಂಟೆಗಳಲ್ಲಿ ಎಂಟು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಮಗನೇ ತಂದೆಗಿಟ್ಟಿದ್ದ ಮುಹೂರ್ತ

ಮೊದಲ ಪತ್ನಿಯ ಮಗ ವಿನಾಯಕ್ ತನ್ನ ತಂದೆಯ ಜೊತೆ ಆಸ್ತಿಗೆ ಸಂಬಂಧಿಸಿದಂತೆ ಆಗಾಗ ಜಗಳವಾಗುತ್ತಿತ್ತಂತೆ, ಆಸ್ತಿಗೆ ಸಂಬಂಧಿಸಿದಂತೆ ವಿನಾಯಕ್ ಎಂಬುವ ಆರೋಪಿ ತಂದೆಯ ಕೊಲೆಗೆ ಸ್ಕೆಚ್ ಹಾಕಿದ್ದ ಎಂದು ತಿಳಿದುಬಂದಿದೆ.

ಇನ್ನು ಈ ಘಟನೆ ಸಂಬಂಧ ಪ್ರಮುಖ ಆರೋಪಿ ವಿನಾಯಕ್ ಬಾಕಳೆ ಸೇರಿದಂತೆ, ಇತರ ಆರೋಪಿಗಳಾದ ಫೈರೋಜ್ ಖಾಜಿ, ಜಿಶಾನ್ ಖಾಜಿ, ಮೀರಜ್​ ಮೂಲದ ಸಾಹಿಲ್, ಸೋಹೆಲ್ ಖಾಜಿ, ಸುಲ್ತಾನ್ ಶೇಖ್, ಮಹೇಶ್ ಸಾಳೋಂಕೆ, ವಾಹಿದ್ ಬೇಪಾರಿಯನ್ನು ಬಂಧಿಸಲಾಗಿದೆ.

65 ಲಕ್ಷ ರೂಪಾಯಿಗೆ ನಡೆದಿತ್ತು ಡೀಲ್, ಸುಪಾರಿ ಕೊಟ್ಟಿದ್ದ ವಿನಾಯಕ್

ಪ್ರಕರಣದ ಮೊದಲ ಆರೋಪಿ ವಿನಾಯಕ್ ಬಾಕಳೆ (ಪ್ರಕಾಶ್ ಬಾಕಳೆಯ ಮೊದಲ ಪತ್ನಿಯ ಮಗ) ಮತ್ತೊಬ್ಬ ಆರೋಪಿ ಫೈರೋಜ್​ಗೆ 65 ಲಕ್ಷ ರೂಪಾಯಿ ಹಣಕ್ಕೆ ಸುಪಾರಿ ಡೀಲ್​ ಕೊಟ್ಟಿದ್ದ. ಮುಂಗಡವಾಗಿ 2 ಲಕ್ಷ ರೂಪಾಯಿ ಕೊಟ್ಟಿದ್ದ ವಿನಾಯಕ್ ಬಾಕಳೆ ತಂದೆ ಪ್ರಕಾಶ್ ಬಾಕಳೆ, ಅವರ ಪತ್ನಿ ಸುನಂದಾ ಹಾಗೂ ಪುತ್ರ ಕಾರ್ತಿಕ್ ಕೊಲೆಗೆ ಸಂಚು ಹೂಡಿದ್ದ. ತಂದೆ ಪ್ರಕಾಶ್ ಜೊತೆ ವ್ಯವಹಾರಿಕ ವೈಮನಸ್ಸಿನ ಕಾರಣ ಈ ಕೊಲೆಗೆ ಆತ ಸಂಚು ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ತಿ ಮಾರಾಟ ವಿರೋಧಿಸಿದ್ದಕ್ಕೆ ಕೃತ್ಯ

ಪ್ರಕಾಶ್ ಹಿರಿಯ ಮಗನ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದರು. ಆದರೆ, ಪ್ರಕಾಶ್ ಗಮನಕ್ಕೆ ತಾರದೇ ಮಗ ವಿನಾಯಕ್ ಕೆಲ ಆಸ್ತಿ ಮಾರಿದ್ದ. ಆತನ ವರ್ತನೆಗೆ ಬೇಸತ್ತು ಜಗಳವಾಡಿದ್ದ ಪ್ರಕಾಶ್ ಬಾಕಳೆ ಜಗಳವಾಡಿದ್ದರು. ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರಕಾಶ್, ಪತ್ನಿ ಸುನಂದಾ, ಪುತ್ರ ಕಾರ್ತಿಕ್​ ಹತ್ಯೆಗೆ ಆರೋಪಿ ವಿನಾಯಕ್ ಸಂಚು ಹೂಡಿದ್ದ.

 

Related