ಜಿಲ್ಲೆಗೆ ತಲುಪಿದ ನಾಲ್ಕು ವಿಶೇಷ ‘ಆಕ್ಸಿ ಬಸ್’

ಜಿಲ್ಲೆಗೆ ತಲುಪಿದ ನಾಲ್ಕು ವಿಶೇಷ ‘ಆಕ್ಸಿ ಬಸ್’

ಕಾರವಾರ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಆಮ್ಲಜನಕದ ಪೂರೈಸಲು ನಾಲ್ಕು ವಿಶೇಷ ‘ಆಕ್ಸಿ ಬಸ್’ಗಳು ಜಿಲ್ಲೆಗೆ ಬಂದಿವೆ.
ಬೆಂಗಳೂರಿನ ಇಂಡಿ ವಿಲೇಜ್ ಎಂಬ ಸಂಸ್ಥೆಯೊಂದು ನೀಡಿದ್ದು, ಆಕ್ಸಿಜನ್ ಕಾನ್ಸಂಟ್ರೇಟರ್ಸ್  ಒಳಗೊಂಡಿದೆ.  ಸೋಂಕಿತರು ಹೆಚ್ಚಿರುವ ಕೆಲವು ಜಿಲ್ಲೆಗಳಲ್ಲಿ ಆಮ್ಲಜನಕ ಸಹಿತ ಹಾಸಿಗೆಗಳು ಸಿಗದೆ ಸಮಸ್ಯೆಯಾಗಿದೆ. ಹಾಸಿಗೆ ಸಿಗುವ ತನಕ ಸೋಂಕಿತರು ವೈದ್ಯಕೀಯ ಆಮ್ಲಜನಕದ ಸಹಾಯದಲ್ಲಿ ಇರಲು ಈ ಬಸ್‌ಗಳು ಬಳಕೆಯಾಗುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲೆಯಲ್ಲಿ ಈವರೆಗೆ ಹಾಸಿಗೆಯ ಕೊರತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು ಇರುವ ಬಸ್‌ಗಳನ್ನು ಸರ್ಕಾರ ಕಳುಹಿಸಿಕೊಟ್ಟಿದೆ ಎಂದರು.

ಬಸ್‌ನಲ್ಲಿರುವ ಸಲಕರಣೆಗಳ ಮೂಲಕ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು 95ಕ್ಕೆ ಏರಿಸಲು ಸಾಧ್ಯವಿದೆ. ಕಾರವಾರ, ಹೊನ್ನಾವರ, ಶಿರಸಿ ಮತ್ತು ದಾಂಡೇಲಿಯಲ್ಲಿ ಈ ಬಸ್‌ಗಳನ್ನು ನಿಲುಗಡೆ ಮಾಡಲಾಗುವುದು. ಅಲ್ಲಿಂದಲೇ ಅಗತ್ಯವಿರುವ ಕಡೆಗೆ ಕಳುಹಿಸಲಾಗುವುದು’ ಎಂದು ಹೇಳಿದರು.

Related