ಫುಡ್ ಕಿಟ್ ಹಣ ಮಂಗಮಾಯ!?

ಫುಡ್ ಕಿಟ್ ಹಣ ಮಂಗಮಾಯ!?

ಬೆಂಗಳೂರು-ಲಾಕ್​ಡೌನ್ ವೇಳೆ ಕಾರ್ಮಿಕ ಇಲಾಖೆಯಿಂದ ೯೦೦ ಕೋಟಿ ರೂ. ವೆಚ್ಚ ಮಾಡಿದ್ದರೂ ಸ್ಪಷ್ಟತೆ ಇಲ್ಲ. ಆಹಾರ ಕಿಟ್ ವಿತರಣೆ ಮತ್ತು ಕಾರ್ಮಿಕರಿಗೆ ಐದು ಸಾವಿರ ರೂ. ಪರಿಹಾರ ನೀಡಿಕೆಯಲ್ಲೂ ಪಾರದರ್ಶಕತೆ ಕಾಣುತ್ತಿಲ್ಲ ಎಂದು ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಿಟ್ ಯಾರಿಗೆ ಕೊಟ್ಟಿದ್ದೀರಿ? ಸಂಘಟಿತ, ಅಸಂಘಟಿತರೆಷ್ಟು? ಮಾಹಿತಿ ಕೊಡಿ ಎಂದು ಕೇಳಿದ್ದೆವು. ಅವರು ಕೊಟ್ಟ ಮಾಹಿತಿ ತೃಪ್ತಿ ತಂದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಅಧಿಕಾರಿಗಳು ಮತ್ತೊಮ್ಮೆ ಮಾಹಿತಿ ನೀಡಿದ ಮೇಲೆ ಸತ್ಯಾಂಶ ಗೊತ್ತಾಗಲಿದೆ ಪರಿಹಾರ ಹಣ ಎಲ್ಲಿ ಹೋಯ್ತು? ಫುಡ್ ಕಿಟ್ ನೋಡಿದರೆ ಮಂಗ ಮಾಯಾ! ಎಲ್ಲವೂ ವಿಚಿತ್ರ ಅಯೋಮಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Related