ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಪಾರ್ಕಿಂಗ್ನಲ್ಲಿ ಬೆಂಕಿ ಅವಘಡ, ಸುಟ್ಟು ಬೂದಿಯಾದ ನೂರಾರು ಕಾರು, ಬೈಕ್ ಗಳು.!!

  • In Crime
  • June 8, 2022
  • 211 Views
ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಪಾರ್ಕಿಂಗ್ನಲ್ಲಿ ಬೆಂಕಿ ಅವಘಡ, ಸುಟ್ಟು ಬೂದಿಯಾದ ನೂರಾರು ಕಾರು, ಬೈಕ್ ಗಳು.!!

ನವದೆಹಲಿ, ಜೂ 08 : ದೆಹಲಿಯ ಜಾಮಿಯಾ ನಗರದ ಎಲೆಕ್ಟ್ರಿಕ್ವಾಹನಗಳ ಪಾರ್ಕಿಂಗ್ನಲ್ಲಿ ಅಗ್ನಿ ಅವಘಡವಾಗಿದ್ದು ನೂರಾರು ವಾಹನಗಳು ಸುಟ್ಟು ಬೂದಿಯಾಗಿದೆ. ಪಾರ್ಕಿಂಗ್ ಲಾಟ್ನಲ್ಲಿ ಬೆಂಕಿಯ ಕೆನ್ನಾಲಿಗೆ ಎಲೆಕ್ಟ್ರಿಕ್ಕಾರು, ರಿಕ್ಷಾ, ಸ್ಕೂಟರ್ಸೇರಿದಂತೆ ಹಲವು ವಾಹನಗಳನ್ನು ಆಹುತಿ ತೆಗೆದುಕೊಂಡಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದೆ.

ಅಗ್ನಿಶಾಮಕ ದಳದ ಮಾಹಿತಿಯ ಪ್ರಕಾರ 11 ವಾಹನಗಳು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಸಲಾಗಿದೆ. 10 ಕಾರುಗಳು, ಒಂದು ಮೋಟರ್ಬೈಕ್, ಎರಡು ಸ್ಕೂಟರ್, 30 ಹೊಸ ಎಲೆಕ್ಟ್ರಿಕ್ರಿಕ್ಷಾ ಮತ್ತು 50 ಹಳೆಯ ರಿಕ್ಷಾಗಳು ಬೆಂಕಿಗೆ ಆಗುತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ಯಾವುದೇ ಪ್ರಾಣಾಪಾಯವಾಗಿಲ್ಲ. ಪಾರ್ಕಿಂಗ್ವ್ಯವಸ್ಥೆಯ ಕೆಲಸಗಾರರು ಘಟನಾ ಸ್ಥಳದಲ್ಲೇ ಇದ್ದರಾದರೂ ಬೆಂಕಿನ್ನು ನಂದಿಸಲು ಸಾಧ್ಯವಾಗಿಲ್ಲ. ಬೆಂಕಿಗೆ ಕಾರಣವೇನು ಎಂಬುದು ಸಹ ಇದುವರೆಗೂ ತಿಳಿದು ಬಂದಿಲ್ಲ.

 

 

Related