ಫಯಾಜ್ ಮದುವೆಗಾಗಿ ನಮಗೆ ಪದೇಪದೇ ಪೀಡಿಸುತ್ತಿದ್ದ: ನೇಹಾ ತಂದೆ

ಫಯಾಜ್ ಮದುವೆಗಾಗಿ ನಮಗೆ ಪದೇಪದೇ ಪೀಡಿಸುತ್ತಿದ್ದ: ನೇಹಾ ತಂದೆ

ಹುಬ್ಬಳ್ಳಿ: ಇಡೀ ರಾಜ್ಯದ ಜನತೆ ಬೆಚ್ಚಿ ಬೀಳಿಸುವಂತಹ ಘಟನೆ ಒಂದು ಏಪ್ರಿಲ್ 18ರಂದು ಹುಬ್ಬಳ್ಳಿ ಕಾಲೇಜ್ನಲ್ಲಿ ನಡೆದಿದ್ದು, ಈ ಘಟನೆಯಲ್ಲಿ ನೇಹಾ ಎಂಬ ಯುವತಿಯನ್ನು‌ ಫಯಾಜ್ ಯುವಕ ಚಾಕುವಿನಿಂದ ಹಿರಿದು ಕೊಲೆ ಮಾಡಿದ್ದಾನೆ.

ಇನ್ನು ಈ ಸಂಬಂಧ ನೇಹಾ ಅವರ ತಂದೆ ತಾಯಿಗಳು ದೂರು ದಾಖಲಿಸಿದ್ದು, ಈ ದೂರದಲ್ಲಿ ಆರೋಪಿ ಫಯಾಜ್ ನನ್ನ ಮಗಳು ನೇಹಾಗೆ ಮದುವೆ ಮಾಡಿಕೊಡಿ ಎಂದು ಕಳೆದ ಐದಾರು ತಿಂಗಳ ಹಿಂದೇನೇ ನನಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ.

ಆದರೆ ನಾವು ಮದುವೆ ನಿರಾಕರಿಸಿದ್ದಕ್ಕೆ ಈಗ ನನ್ನ ಮಗಳ ಜೀವನವನ್ನೇ ತೆಗೆದಿದ್ದಾನೆ ಕ್ರೂರಿ ಎಂದು ನೇಹಾ ತಂದೆ ಕಣ್ಣೀರು ಹಾಕಿದ್ದಾರೆ.

ನೇಹಾಗೆ ನಾವು ಇನ್ನು ಹೆಚ್ಚಿನ ಅಭ್ಯಾಸ ಮಾಡಿಸುತ್ತೇವೆ ಹಾಗಾಗಿ ಈಗಲೇ ಮದುವೆ ಮಾಡಿಕೊಡಲು ಸಾಧ್ಯವಿಲ್ಲವೆಂದು ನಾವು ಆರೋಪಿ ಫಯಾಜ್ ಅವರ ತಂದೆ ತಾಯಿಗೆ ತಿಳಿಸಿದ್ದೇವು ಆದರೆ ಇದನ್ನೇ ಮನದಲ್ಲಿಟ್ಟುಕೊಂಡು ಫಯಾಜ್ ನನ್ನ ಮಗಳಿಗೆ ಚಾಕುವಿನಿಂದ ಹಿರಿದು ಕೊಲೆ ಮಾಡಿದ್ದಾನೆ ಎಂದು ಸ್ನೇಹ ಹಿರೇಮಠ ಅವರ ತಂದೆ ದೂರಿನಲ್ಲಿ ದಾಖಲಿಸಿದ್ದಾರೆ.

ನೇಹಾ ಮತ್ತು ಆರೋಪಿ ಫಯಾಜ್ ಬಿಸಿಎ ಅಂತಿಮ ವರ್ಷದಲ್ಲಿ ಓದುತ್ತಿರುವಾಗ ಫಯಾಜ್​ ನೇಹಾಳಿಗೆ ಪ್ರಪೋಸ್​ ಮಾಡಿದ್ದನು. ಅಲ್ಲದೆ ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಅಂತ ನೇಹಾ ಪೋಷಕರಿಗೆ ಪದೇ ಪದೇ ಕರೆ ಮಾಡಿ ಪೀಡಿಸುತ್ತಿದ್ದನು. ಆಗ ನೇಹಾ ಪೋಷಕರು ನಮ್ಮ ಮಗಳು ನಿನ್ನನ್ನು ಇಷ್ಟಪಡುತ್ತಿಲ್ಲ, ಅವಳಿಗೆ ಹೆಚ್ಚಿನ ವ್ಯಾಸಂಗ ಮಾಡುವ ಇಚ್ಛೆ ಇದೆ ಎಂದು ಫಯಾಜ್​ಗೆ ಹೇಳಿದ್ದಾರೆ.

ಇದರಿಂದ ಕೋಪಗೊಂಡ ಫಯಾಜ್​ ಗುರುವಾ (ಏ.18) ರಂದು ಸಾಯಂಕಾಲ 4:30ಕ್ಕೆ ನೇಹಾ ಹಿರೇಮಠ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ನೇಹಾ ತಂದೆ ನಿರಂಜನ ಹಿರೇಮಠ ದಾಖಲಸಿದ್ದಾರೆ.

 

Related