ತಂದೆಯೇ ನನಗೆ ಆದರ್ಶ: ಗೀತಾ ಶಿವರಾಜ್‌ಮಾರ್

ತಂದೆಯೇ ನನಗೆ ಆದರ್ಶ: ಗೀತಾ ಶಿವರಾಜ್‌ಮಾರ್

ಕುಂದಾಪುರ: ರಾಜ್ಯ ರಾಜಕೀಯದಲ್ಲಿ ಲೋಕ ಸಮರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಗೀತಾ ಶಿವರಾಜಕುಮಾರ್ ಅವರು ಶಿವಮೊಗ್ಗದಲ್ಲಿ ಭರ್ಜರಿ ಕ್ಯಾಂಪಿಯನ್ ಶುರು ಮಾಡಿದ್ದಾರೆ.

ಎಲ್ಲ ಕಡೆ ತಂದೆ ಬಂಗಾರಪ್ಪರನ್ನು ಪ್ರೀತಿ ಮಾಡುವ ಜನರಿದ್ದಾರೆ. ಅವರೇ ನನಗೆ ಆದರ್ಶ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು. ಅವರು ಬೈಂದೂರು ಕ್ಷೇತ್ರದ ವಂಡ್ಸೆ- ನೆಂಪುವಿನಲ್ಲಿರುವ ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, ಶಿವಮೊಗ್ಗಕ್ಕಿಂತ ಬೈಂದೂರಿಗೆ ಹೆಚ್ಚಿನ ಒತ್ತನ್ನು ಕೊಡುತ್ತೇವೆ. ತಂದೆ ಬಂಗಾರಪ್ಪನವರು ಬೈಂದೂರು ಜನರ ಪ್ರೀತಿಪಾತ್ರರಾದವರು. ಮೋದಿ ಜನಕ್ಕೆ ಏನು ಗ್ಯಾರಂಟಿ ಕೊಟ್ಟಿದ್ದಾರೆ. ಸಂಸದ ರಾಘವೇಂದ್ರರ ಸಾಧನೆಯೇನು? ಯಾವ ಗ್ಯಾರಂಟಿ ತಂದಿದ್ದಾರೆ ಎಂದು ಪ್ರಶ್ನಿಸಿದರು. ಕುಮಾರ್ ಬಂಗಾರಪ್ಪ ಕುರಿತು ಕೇಳಿದ ಪ್ರಶ್ನೆಗೆ ಗರಂ ಆದ ಅವರು, ಕೆಲವಕ್ಕೆ ಉತ್ತರ ಕೊಟ್ಟು ಅಭ್ಯಾಸವಿಲ್ಲ ಎಂದರು.

ಶಿವಮೊಗ್ಗದಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಬಣಗಳ ನಡುವಿನ ಭಿನ್ನಾಭಿಪ್ರಾಯ ದಿನೇದಿನೆ ಹೆಚ್ಚುತ್ತಿರುವುದರಿಂದ ಅಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಜಾತಿ, ಧರ್ಮ ಆಧಾರವಾಗಿಟ್ಟು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದವರು ಹೇಳಿದರು.

 

Related