ರೈತರ ಮೇಲೇಕೆ ನಿಮಗೆ ಸಿಟ್ಟು?

ರೈತರ ಮೇಲೇಕೆ ನಿಮಗೆ ಸಿಟ್ಟು?

ಚಾಮರಾಜನಗರ: ಜಿಲ್ಲೆಯ ಯಳಂದೂರುನಲ್ಲಿ ಕರ್ನಾಟಕ ಬಂದ್ ಹಿನ್ನಲೆ ಅನ್ನದಾತರು ಮತ್ತು ರೈತ ಮುಖಂಡರು ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಸ್ತೆ ತಡೆದು ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು ಎಪಿಎಂಸಿ ಮುಂದೆ ರಸ್ತೆ ತಡೆ ಹಾಕಿ ಪ್ರತಿಭಟನೆ ನಡೆಸಿದರು.  ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂದೆ ಡಿವೈಎಸ್ಪಿ ಅನ್ಸರ್ ಆಲಿಯನ್ನು ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಹೀಗೆ ಪ್ರತಿಭಟನೆ ನಡೆಸಿದಾಗ ಹೀಗೆಯೇ ಬೆಂಕಿ ನಂದಿಸಿದ್ದೀರಾ? ರೈತರ ಮೇಲೇಕೆ ನಿಮಗೆ ಸಿಟ್ಟು? ನಾವು ಯಾವುದೇ ಆಸ್ತಿಪಾಸ್ತಿ ಗೆ ಬೆಂಕಿ ಹಚ್ಚಿಲ್ಲ, ಬಸ್‍ಗಳಿಗೆ ಬೆಂಕಿ ಹಚ್ಚಿಲ್ಲ ಸರ್ಕಾರದ ನೀತಿಗಳಿಂದ ನಮ್ಮ ರೈತರ ಮನೆಗಳು ಹೊತ್ತಿ ಉರಿಯುತ್ತಿವೆ? ನೀವು ರೈತರ ಮಕ್ಕಳಲ್ಲವೆ? ನಾವು ಬಂದ್ ಮಾಡುವಂತೆ ಯಾರನ್ನು ಒತ್ತಾಯ ಮಾಡುತ್ತಿಲ್ಲ ಎಂದು ಪೊಲಿಸರ ಮೇಲೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಚಾಮರಾಜನಗರದ ಸಂತೇಮರಳ್ಳಿ ಸರ್ಕಲ್ ನಲ್ಲಿರುವ ಪೆಟ್ರೋಲ್ ಬಂಕ್ ಮುಚ್ಚುವಂತೆ ಕೈ ಮುಗಿದು ಬಂದ್ ಗೆ ಸಹಕರಿಸುವಂತೆ ರೈತರು ವಿನಂತಿಸಿದರು.

ವಿಡಿಯೋ: https://youtu.be/5M-6bhzg7Hk

Related