ಕೆರೆಗೆ ದ್ರಾಕ್ಷಿ ಸುರಿದ ರೈತ!

ಕೆರೆಗೆ ದ್ರಾಕ್ಷಿ ಸುರಿದ ರೈತ!

ಚಿಕ್ಕಬಳ್ಳಾಪುರ: ಕೊರೋನಾ ಲಾಕ್ ಡೌನ್ ಹಿನ್ನಲ್ಲೆ ರೈತರು ಬೆಳೆದ ಬೆಳೆಗಳು ಕೈಗೆಸೆರುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದಾರೆ. ಹಳೇಗುಡಿಬಂಡೆ ಹನುಮಂತರೆಡ್ಡಿ ೫ ಎಕರೆ ಜಮೀನಿನಲ್ಲಿ ಬೆಳೆದ ದ್ರಾಕ್ಷಿ ಬೆಳೆ ಕೆರೆಗೆ ಸುರಿದ್ದಾನೆ.

ಸುಮಾರು 9 ಲಕ್ಷ ರೂ. ರ‍್ಚು ಮಾಡಿ ದ್ರಾಕ್ಷಿ ಬೆಳೆದಿದ್ದು, ಕೊರೊನಾ ಲಾಕ್ಡೌನ್ ಸಂಕಷ್ಟದಿಂದಾಗಿ ದ್ರಾಕ್ಷಿಯನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಬಂದರೂ ಸಹ ಬಹಳ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಸಾಗಿಸಲಾಗದೇ ತಾವು ಬೆಳೆದ ದ್ರಾಕ್ಷಿಯನ್ನೆಲ್ಲ ತಿಪ್ಪೆಗೆ ಸುರಿದಿದ್ದು, ತೀವ್ರ ಬೇಸರ ಅನುಭವಿಸಿದ್ದಾರೆ.

ಕಳೆದ ಎರಡು-ಮೂರು ದಿನಗಳಿಂದ ಹನುಮಂತರೆಡ್ಡಿ ತೋಟದಲ್ಲಿ ಕೊಳೆಯುವ ಸ್ಥಿತಿಗೆ ತಲುಪಿದ 10 ಟನ್ ದ್ರಾಕ್ಷಿಯನ್ನು ಕಟಾವು ಮಾಡಿ, 5-6ಟ್ಯಾಕ್ಟರ್ ಗಳಷ್ಟು ದ್ರಾಕ್ಷಿಯನ್ನು ಅಮಾನಿ ಬೈರಸಾಗರ ಕೆರೆಯ ಬಳಿಯ ಗುಂಡಿಗೆ ಸುರಿಯುತ್ತಿದ್ದಾರೆ. ಈಗಾಗಲೇ ಇವರು ಗುಡಿಬಂಡೆ ಸ್ಟೇಟ್ ಬ್ಯಾಂಕ್ ನಲ್ಲಿ 20 ಲಕ್ಷ ಸಾಲ ಮಾಡಿದ್ದು, ದ್ರಾಕ್ಷಿ ಬೆಳೆಯನ್ನು ಮಾಡಿ ಸಾಲ ತೀರಿಸೋಣ ಎಂದುಕೊಂಡಿದ್ದರು. ಆದರೆ ಈಗ ಎಲ್ಲವೂ ಕೈಕೊಟ್ಟಿದ್ದು, ದಿಕ್ಕು ತೋಚದಾಗಿದ್ದಾರೆ.

Related