ಯುವ ಕೇಂದ್ರಕ್ಕೆ ಖೇಲೋ ಇಂಡಿಯಾಗೆ ಮಾನ್ಯತೆ

ಯುವ ಕೇಂದ್ರಕ್ಕೆ ಖೇಲೋ ಇಂಡಿಯಾಗೆ ಮಾನ್ಯತೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ ಸ್ವತಂತ್ರ ಪ್ರಭಾರ ಕಿರಣ್ ರಿಜಿಜು ಅವರು, ಇಂದು ಬೆಂಗಳೂರು ವಿದ್ಯಾನಗರದಲ್ಲಿರುವ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ಕೇಂದ್ರವನ್ನು ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ  ಕೇಂದ್ರವೆಂದು ಘೋಷಿಸಿದರು.

ಭಾರತದ 8 ರಾಜ್ಯಗಳ ಕ್ರೀಡಾ ಕೇಂದ್ರಗಳಿಗೆ ಈ ಮಾನ್ಯತೆ ದೊರೆತಿದ್ದು, ಬೆಂಗಳೂರು ಕೇಂದ್ರದಲ್ಲಿ ಈಜು, ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳ ತರಬೇತಿ ನೀಡಲಾಗುವುದು.

ಈ ಸಂದರ್ಭದಲ್ಲಿ ಅರುಣಾಚಲ ಪ್ರದೇಶ, ಕೇರಳ, ಮಣಿಪುರ, ಮಿಝೋರಂ, ನಾಗಾಲ್ಯಾಂಡ್, ಒಡಿಶಾ ಹಾಗೂ ತೆಲಂಗಾಣ ರಾಜ್ಯಗಳ ಕ್ರೀಡಾ ಸಚಿವರು, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅರ್ಜುನ ಪ್ರಶಸ್ತಿ ಪುರಸ್ಕೃತ ಒಲಿಂಪಿಕ್ಸ್ ಶೂಟರ್ ಪಿ.ಎನ್ ಪ್ರಕಾಶ್ ಹಾಗೂ ಹಾಕಿ ಆಟಗಾರ ವಿ.ಆರ್ ರಘುನಾಥ್ ಉಪಸ್ಥಿತರಿದ್ದರು.

Related