ರೋಮಾಂಚನ ಮರಕುಟಿಗ ಕಾದಾಟ

ನವದೆಹಲಿ, ಮಾ. 3 : ಮಕ್ಕಳನ್ನು ಕಾಪಾಡಿಕೊಳ್ಳಲು ಎಷ್ಟು ತೊಂದರೆ ಆದರೂ ಸರಿಯೇ ಅದನ್ನು ಎದುರಿಸಲು ತಾಯಿ ತನ್ನ ಪ್ರಾಣವನ್ನೇ ಮುಡಿಪಾಗಿಡುತ್ತಾಳೆ ಎಂಬುದು ಅಕ್ಷರಶಃ ಸತ್ಯ. ಇದು ಮೂಕ ಪ್ರಾಣಿ-ಪಕ್ಷಿಗಳಿಗೂ ಮರಕುಟಿಗ ಪಕ್ಷಿಯೊಂದು ತನ್ನ ಮರಿಯನ್ನು ಹಾವಿನ ದಾಳಿಯಿಂದ ರಕ್ಷಿಸಿಕೊಳ್ಳಲು ಅದರ ವಿರುದ್ಧ ಹೋರಾಡಿದ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಸಾಂತ ನಂದಾ ಅವರು ಭಾನುವಾರವಷ್ಟೇ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಾಯಿಯ ಪ್ರೀತಿಯನ್ನು ಎಂದಿಗೂ ಸೋಲಿಸಲಾಗದು. ಮರಕುಟಿಕಗವೊಂದು ತನ್ನ ಮರಿಗಳನ್ನು ಕಾಪಾಡಲು ಹಾವಿನೊಂದಿಗೆ ಸೆಣಸಾಡಿದೆ ಎಂದು ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.
ಹಾವು ಮತ್ತು ಮರಕುಟಿಗ ನಡುವೆ ಕಾದಾಟ ನಡೆಯುತ್ತದೆ. ಕೊನೆಗೂ ಹಾವನ್ನು ಮಣಿಸಿದ ಮರಕುಟಿಗ ತನ್ನ ಮರಿಗಳನ್ನು ಯಶಸ್ವಿಯಾಗಿ ರಕ್ಷಿಸಿಕೊಳ್ಳುತ್ತದೆ.

Related