ಎತ್ತನಹೊಳೆ ಯೋಜನೆ ಶೀಘ್ರವೇ ಜಾರಿ

ಎತ್ತನಹೊಳೆ ಯೋಜನೆ ಶೀಘ್ರವೇ ಜಾರಿ

ಗೌರಿಬಿದನೂರು : ನಗರೋತ್ಥಾನ ಯೋಜನೆ ಅಡಿಯಲ್ಲಿ ಮೂಲಭೂತ ಸೌಕರ್ಯ ನೀಡಲು ಸರ್ಕಾರ ಬದ್ಧ ಎಂದು ವೈದ್ಯಕೀಯ ಸಚಿವ ಡಾಕ್ಟರ್ ಸುಧಾಕರ್ ನುಡಿದರು. ಗೌರಿಬಿದನೂರು ವಿಭಾಗದ ಜ್ವಲಂತ ಸಮಸ್ಯೆಗಳಾದ ಕುಡಿಯುವ ನೀರು ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಎತ್ತಿನಹೊಳೆ ನೀರಿನ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹ ನೀಡುತ್ತಿದೆ ಎಂದು  ಡಾ. ಕೆ ಸುಧಾಕರ್ ತಿಳಿಸಿದರು.

ಶುಕ್ರವಾರ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ನಗರೋತ್ಥಾನ ಮೂರನೇ ಹಂತದ 7. 81 ಲಕ್ಷ ರೂ ಕಾಮಗಾರಿ ಯೋಜನೆ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಮಾತನಾಡಿ ಚಾಲನೆ ನೀಡಿದರು. ನಗರೋತ್ಥಾನ ಯೋಜನೆ ಅಡಿಯಲ್ಲಿ ದೇಶವ್ಯಾಪ್ತಿ ಅಭಿವೃದ್ಧಿ ಆಗುತ್ತಿದೆ. ವಿಶೇಷವಾಗಿ ಚಿಕ್ಕಬಳ್ಳಾಪುರ ಗೌರಿಬಿದನೂರು ಭಾಗದಲ್ಲಿ ಒತ್ತು ನೀಡುತ್ತಿದ್ದೇನೆ. ಜಿಲ್ಲೆಗೆ ಕೃಷ್ಣಾ ನದಿಯ 10 ಟಿಎಂಸಿ ಹೆಚ್ಚುವರಿ ನೀರು ತರಿಸಲು ಈಗಾಗಲೇ ಆಂಧ್ರ ಪ್ರದೇಶ ಮುಖ್ಯಮಂತ್ರಿಯವರ ಬಳಿ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಮಾಜಿ ಕೃಷಿ ಸಚಿವ, ಶಾಸಕ ಎಂ ಎಚ್ ಶಿವಶಂಕರರೆಡ್ಡಿ ಮಾತನಾಡಿ ಗೌರಿಬಿದನೂರು ತಾಲ್ಲೂಕು ಅಭಿವೃದ್ಧಿಯಲ್ಲಿ ದಾಪುಗಾಲು ಹಾಕಿದ್ದು ಈ ಹಿಂದೆ ಮಾಜಿ ಮುಖ್ಯಮಂತ್ರಿಗಳ ಸರ್ಕಾರದ ಆಡಳಿತದಲ್ಲಿ ಹೆಚ್ಚಿನ ಅನುದಾನ ಹರಿದುಬಂದು ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಅಭಿವೃದ್ಧಿ ಜರುಗಿದೆ. ಮಿನಿ ವಿಧಾನಸೌಧ, ಅಂಬೇಡ್ಕರ್ ಅಧ್ಯಯನ ಕೇಂದ್ರ,   ಕೈಗಾರಿಕೆಗಳ ಸ್ಥಾಪನೆ, ಹೊಸೂರು ಹೋಬಳಿ ವಿಜ್ಞಾನ ಕೇಂದ್ರ ಇನ್ನಿತರ ಅಭಿವೃದ್ಧಿ ಕಾರ್ಯಗಳು ಆಗಿದೆ. ಸಚಿವ ಜಗದೀಶ್ ಶೆಟ್ಟರ್ ಸಹ ನೆನ್ನೆ ದೂರವಾಣಿ ಮೂಲಕ ಮಾತನಾಡಿ ಕಲಕುಂಟೆ ಮೂರನೇ ಹಂತದ ಅಭಿವೃದ್ಧಿಗೆ ಸುಮಾರು 900 ಎಕರೆ ಮಂಜೂರು ಮಾಡಿದ ಬಗ್ಗೆ ಮಾಹಿತಿ ನೀಡಿದರು.

Related