ತಮ್ಮನ್ನು ಹಾಳು ಮಾಡಿದವರ ವಿರುದ್ಧ ಈಶ್ವರಪ್ಪ ಹೋರಾಡುತ್ತಿದ್ದಾರೆ: ಮಧು ಬಂಗಾರಪ್ಪ

ತಮ್ಮನ್ನು ಹಾಳು ಮಾಡಿದವರ ವಿರುದ್ಧ ಈಶ್ವರಪ್ಪ ಹೋರಾಡುತ್ತಿದ್ದಾರೆ: ಮಧು ಬಂಗಾರಪ್ಪ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕೆ ಎಸ್ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅದರಂತೆ ಇಂದು ಶಿವಮೊಗ್ಗ ಜಿಲ್ಲಾ ಕಚೇರಿಗೆ ಭೇಟಿ ನೀಡಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಇನ್ನು ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ ಅವರು, ಕೆ ಎಸ್ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದರೆ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಆಗುವುದಿಲ್ಲವೆಂದು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮನ್ನು ರಾಜಕೀಯವಾಗಿ ಹಾಳು ಮಾಡಿದವರ ವಿರುದ್ಧ ಈಶ್ವರಪ್ಪ ಹೋರಾಡುತ್ತಿದ್ದಾರೆ. ಅದು ಬಿಜೆಪಿಯೊಳಗಿನ ಆಂತರಿಕ ಕಲಹ. ಈಶ್ವರಪ್ಪ ಬಿಜೆಪಿಯ ಬಿ ಟೀಂ. ಈಶ್ವರಪ್ಪ ಅವರನ್ನು ವ್ಯಕ್ತಿಗತವಾಗಿ ನೊಡಿದರೆ ಬೇಸರವಾಗುತ್ತೆ. ಆದರೆ ಅವರ ಸಿದ್ದಾಂತ ನೋಡಿ ಮರುಕ ಹುಟ್ಟುತ್ತಿಲ್ಲ’ ಎಂದರು.

 

Related