ನಂದಿ ಗಿರಿಧಾಮಕ್ಕೆ ಎಲೆಕ್ಟ್ರಿಕ್ ರೈಲು ಸೇವೆ ಆರಂಭ

ನಂದಿ ಗಿರಿಧಾಮಕ್ಕೆ ಎಲೆಕ್ಟ್ರಿಕ್ ರೈಲು ಸೇವೆ ಆರಂಭ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ಪ್ರವಾಸಿಗರ ಪ್ರಸಿದ್ಧಿ ತಾಣವಾಗಿರುವ ನಂದಿ ಗಿರಿಧಾಮಕ್ಕೆ ಇದೇ ಡಿಸೆಂಬರ್ 11 ರಿಂದ ವಿದ್ಯುತ್ ರೈಲು ಪ್ರಾರಂಭವಾಗಲಿದ್ದು ಪ್ರವಾಸಿಗರಿಗೆ ಇನ್ನಷ್ಟು ಅನುಕೂಲ ವಾಗುವಂತೆ ರೈಲ್ವೆ ಇಲಾಖೆ ಮುಂದಾಗಿದೆ.

ಹೌದು ಕರ್ನಾಟಕದಲ್ಲಿ ಅತ್ಯಂತ ಪ್ರವಾಸಿಗರನ್ನು ಹೊಂದಿರುವ ಸ್ಥಳವೆಂದರೆ ಅದು ನಂದಿ ಬೆಟ್ಟ. ಈ ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಜನಗಳು ಬಂದು ಇಲ್ಲಿರುವ ರಮಣೀಯ ಸೌಂದರ್ಯವನ್ನು ಪ್ರವಾಸಿಗರು ತಮ್ಮ ಕಣ್ಣನ್ನು ತುಂಬಿಕೊಳ್ಳುತ್ತಾರೆ.

ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಮಾನ ನಿಲ್ದಾಣ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲುಗಳನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. 06531/06532 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್, 06535/06583 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ, ಮತ್ತು 06593/06594 ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ರೈಲುಗಳು ಸಂಚರಿಸಲಿವೆ.

 

Related